ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಂಗಳೂರು (Bangaluru): ಬಿಜೆಪಿ(BJP) ಹೈಕಮಾಂಡ್ ಇನ್ನಿಬ್ಬರು ಶಾಸಕರಿಗೆ ಶಾಕ್ ನೀಡಿದೆ. ಶಾಸಕರಾದ ಶಿವರಾಮ್ ಹೆಬ್ಬಾರ್(Shivaram Hebbar) ಹಾಗೂ ಎಸ್ಟಿ ಸೋಮಶೇಖರ್(S T Somashekhar) ಅವರನ್ನ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಮಾಡಿದೆ.
ಕಳೆದ ಕೆಲ ದಿನಗಳ ಹಿಂದೆ ಬಸವನಗೌಡ ಪಾಟೀಲ್ ಯತ್ನಾಳ್(Yatnal) ಅವರನ್ನ ಉಚ್ಚಾಟಿಸಲಾಗಿತ್ತು. ಇದೀಗ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ(Yallapur) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಿವರಾಮ್ ಹೆಬ್ಬಾರ್(Shivaram Hebbar) ಹಾಗೂ ಬೆಂಗಳೂರಿನ ಯಶವಂತಪುರ(Yashwantapur) ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಸ್ ಟಿ ಸೋಮಶೇಖರ್ ಅವರನ್ನ ಪಕ್ಷದಿಂದ ಔಟ್ ಮಾಡಲಾಗಿದೆ.
2019ರಲ್ಲಿ ಇವರಿಬ್ಬರೂ ಕಾಂಗ್ರೆಸ್(Congres) ಬಿಟ್ಟು ಬಿಜೆಪಿ ಸೇರಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವರಾಮ್ ಹೆಬ್ಬಾರ್ ಅವರು ಕಾರ್ಮಿಕ ಸಚಿವರಾದರೆ(Labour Minister), ಸೋಮಶೇಖರ್ ಅವರು ಸಹಕಾರ ಸಚಿವರಾಗಿದ್ದರು. 2023ರಲ್ಲಿ ಇಬ್ಬರೂ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಬಂದಿದ್ದರು. ಆದರೆ ಪಕ್ಷದಿಂದ ದೂರ ಉಳಿದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ ಕಾರಣಕ್ಕೆ ಅಂದರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಕ್ಕಾಗಿ ಇಬ್ಬರೂ ಉಚ್ಚಾಟನೆ ಮಾಡಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ.
ಇನ್ನೊಂದುವಾರದಲ್ಲಿಎಲ್ಲವನ್ನು ಹೇಳುತ್ತೇನೆ: ಶಿವರಾಮ್ ಹೆಬ್ಬಾರ್.
ಪಕ್ಷ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಮ್ ಹೆಬ್ಬಾರ್, ನಾವು ಬಿಜೆಪಿ ಗೆ ಹೋಗಿದ್ದರಿಂದಲೇ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಿದ್ದು, ಹಲವು ಜನರು ಮಂತ್ರಿ ಆಗಿದ್ದು, ಕೆಲ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ನಾನು ಹೇಳುತ್ತೇನೆ, ಪಕ್ಷದ ವಿರುದ್ಧ ನಾನು ಮಾತನಾಡಲು ಕಾರಣ ಏನೆಂದು ತಿಳಿಸುತ್ತೇನೆ. ಪಕ್ಷದವರು ‘ಯಾವುದೇ ಸಭೆ, ಸಮಾರಂಭಗಳಿಗೆ ನನ್ನನ್ನು ಕರೆಯುತ್ತಿರಲಿಲ್ಲ. ಕಾಂಗ್ರೆಸ್ ಹೋಗುವ ಪ್ರಶ್ನೆ ಸದ್ಯಕ್ಕೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ : ರಾತ್ರಿ ಕಾರ್ಯಾಚರಣೆ. ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ವಾಹನ ಜಪ್ತಿ.
ಹೋಮಿಯೋಪಥಿಯಲ್ಲಿ ಎಂಡಿ 2ನೇ Rank ಪಡೆದ ಕಾರವಾರದ ಮಧುರಾ ನಾಯಕ
ಜಿಲ್ಲಾಧಿಕಾರಿ ಹೆಸರಲ್ಲಿ ಫೇಸ್ಬುಕ್ ನಕಲಿ ಖಾತೆ. ಎಚ್ಚರ..ಎಚ್ಚರ.
ಶ್ವಾನವನ್ನ ಬೈಕ್ ಗೆ ಕಟ್ಟಿ ದರದರನೇ ಎಳೆದೋಯ್ದ ಭೂಪ. ಪೊಲೀಸರಿಂದ ಸೋಮೊಟೊ ಪ್ರಕರಣ.