ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರ ಸಮೀಪದ ನೇತ್ರಾಣಿ ದ್ವೀಪದ(Netrani island) ಬಳಿಯ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕ ಬೋಟ್(Mechanised Boat) ಮುಳುಗಿದ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಮಹಾಮುರ್ಡೇಶ್ವರ ಹೆಸರಿನ ಬೋಟ್ ದುರಂತಕ್ಕೆ ಈಡಾಗಿದ್ದು ಸುಮಾರು 30 ಮೀನುಗಾರರನ್ನು ಇತರ ಬೋಟಿನ ಮೀನುಗಾರರು ಕಾರ್ಯಾಚರಣೆ ನಡೆಸಿ ರಕ್ಷಣೆ(Rescue) ಮಾಡಿದ್ದಾರೆ. ಯಾಂತ್ರಿಕ ದೋಣಿ ಕಾಯ್ಕಿಣಿಯ ಅಣ್ಣಪ್ಪ ಭೈರಾ ಮೊಗೇರ ಎಂಬುವವರಿಗೆ ಸೇರಿದ್ದಾಗಿದೆ.
ಅಲೆಗಳ ಹೊಡೆತದಿಂದ ದೋಣಿ ಮುಳುಗಿದ್ದು ತೀವ್ರ ನಷ್ಟ ಉಂಟಾಗಿದೆ. ಪರಿಣಾಮವಾಗಿ ಬಲೆಗಳು ಮತ್ತು ಇತರೆ ಮೀನುಗಾರಿಕೆಗೆ ಬೇಕಾದ ವಸ್ತುಗಳು ಸಹ ಸಮುದ್ರಪಾಲಾಗಿವೆ.
ದುರ್ಘಟನೆಯಿಂದ ಬೋಟ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಸಂಭವಿಸಿದೆ. ಸ್ಥಳೀಯ ಮೀನುಗಾರರ ತ್ವರಿತ ಸಹಕಾರದಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಇದನ್ನು ಓದಿ : ಯುವ ಹೃದ್ರೋಗ ತಜ್ಞರೊಬ್ಬರಿಗೆ ಹಾರ್ಟ್ ಆಟ್ಯಾಕ್. ವೈದ್ಯರ ಕಂಬನಿ.
ಗಂಟಲಿಗೆ ಅನ್ನದ ಅಗುಳು ಸಿಲುಕಿ ಯುವಕ ಸಾವು. ಕಾರವಾರದ ಬಿಣಗಾದಲ್ಲಿ ಘಟನೆ