ಅಂಕೋಲಾ: ಜಿಲ್ಲಾ ಮೀನುಗಾರ ರಕ್ಷಣಾ ವೇದಿಕೆ, ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ ಮತ್ತು ನಾಗರೀಕ ವೇದಿಕೆಯ ಸಂಯುಕ್ತಾಶ್ರಾಯದಲ್ಲಿ ತಾಲ್ಲೂಕಿನ ಮೀನುಗಾರ ಸಮಾಜದ ವಿದ್ಯಾರ್ಥಿಗಳಿಗಾಗಿ  ಒಂದು ದಿನದ, “ನಾವಿಕ”- ಮಾರ್ಗದರ್ಶಿ ಕಾರ್ಯಗಾರ  ಆಯೋಜಿಸಲಾಗಿದೆ.

ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ವಿವಿಧ ಜಂಟಿ ಸಂಘಗಳ ಸಭೆಯಲ್ಲಿ ಜಿಲ್ಲಾ ಮೀನುಗಾರ ರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಹರ ಹರಿಕಂತ್ರ ಈ ವಿಷಯ ತಿಳಿಸಿದ್ದಾರೆ. ಮೇ.26ರ ರವಿವಾರ ಮುಂಜಾನೆ 10ಗಂಟೆಗೆ ಪಟ್ಟಣದ ಕಲ್ಪವೃಕ್ಷ ಅಕಾಡೆಮಿಯ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೀನುಗಾರ ಸಮುದಾಯದ ಎಸ್ ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮುಂದೇನು? ಹಾಗೂ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಕುರಿತು ಶಿಬಿರದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದರು.

ಮೀನುಗಾರ ರಕ್ಷಣಾ ವೇದಿಕೆಯ ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಜಿ ಆರ್ ತಾಂಡೇಲ್ ಮಾತನಾಡಿ, ಮುಂದಿನ ಕೋರ್ಸ್ ಗಳ ಆಯ್ಕೆ, ಶೈಕ್ಷಣಿಕ ಅವಕಾಶಗಳು ಮತ್ತು ಸವಾಲುಗಳ ಕುರಿತು ವಿವಿಧ ಶಿಕ್ಷಣ ಮಹಾವಿದ್ಯಾಲಯ ಮತ್ತು ಶಿಕ್ಷಣ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಮಾರ್ಗದರ್ಶನ ಶಿಬಿರದಲ್ಲಿ ಮೇಲೆ ತಿಳಿಸಿದ ವಿದ್ಯಾರ್ಹತೆ ಹೊಂದಿದ ತಾಲ್ಲೂಕಿನ ಮೀನುಗಾರ ಸಮಾಜದ ಎಲ್ಲಾ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಮಾಹಿತಿ ಮತ್ತು ನೋಂದಣಿಗೆ ಹರಿಹರ ಹರಿಕಂತ್ರ (+919482255844), ಜಿ ಆರ್ ತಾಂಡೇಲ್( 9481052402), ಮಾರುತಿ ಹರಿಕಂತ್ರ(9844830083) ಇವರನ್ನು ಸಂಪರ್ಕಿಸಬಹುದು.  ಮೇ.24 ರ ಸಂಜೆ 6ಗಂಟೆ ಒಳಗೆ ಹೆಸರು ನೊಂದಾಯಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

ನಾಗರೀಕ ವೇದಿಕೆಯ ಅಧ್ಯಕ್ಷ ನಾಗರಾಜ ನಾಯ್ಕ, ಮಹೇಶ ಗೌಡ, ಈಶ್ವರ ಗೌಡ, ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಹರಿಕಂತ್ರ, ಮೀನುಗಾರ ರಕ್ಷಣಾ ವೇದಿಕೆಯ ಪ್ರದೀಪ ಸಾದಿಯೇ, ದಯಾನಂದ ಏರಾಗಿ, ಬೆಳಂಬಾರ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಶಾಂಬಾ ಖಾರ್ವಿ, ಬೆಳಂಬಾರ ಗ್ರಾಮ ಪಂಚಾಯತಿ ಸದಸ್ಯ ಜಗದೀಶ ಖಾರ್ವಿ ಮತ್ತಿತರು ಹಾಜರಿದ್ದರು.