ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ನಾವೆಲ್ಲಾ ಮೀನುಗಾರರು. ನಾವೆಲ್ಲ ಒಂದು. ಸಮ ಪಾಲು ಸಮ ಬಾಳು ಘೋಷಣೆಯಡಿಯಲ್ಲಿ ಉತ್ತರಕನ್ನಡ (Uttarakannada) ಜಿಲ್ಲೆಯಲ್ಲಿ ಕರಾವಳಿ ಮೀನುಗಾರ ಕಲಾಶಿಗಳ ಕ್ಷೇಮಾಭಿವೃದ್ಧಿ ಸಂಘ(Karavali Meenugara Kalashigala Sangha) ರಚನೆಯಾಗಿದೆ.

ಇಷ್ಟು ವರ್ಷದಿಂದ ದೂರದ ಮಲ್ಪೆ(Malpe), ಮಂಗಳೂರು(Manglore) ಭಾಗದಲ್ಲಿ ಯಾಂತ್ರಿಕ ದೋಣಿಗಳಲ್ಲಿ(Mechanized Boat) ದುಡಿಯುತ್ತಿರುವ ಮೀನುಗಾರ ಕಲಾಶಿಗಳು(ಕಾರ್ಮಿಕರು) ವೇದಿಕೆಯೊಂದನ್ನ ಸಿದ್ದಪಡಿಸಿಕೊಂಡಿದ್ದಾರೆ. ತಮಗೆ ದುಡಿಮೆಗೆ ಸಿಗಬೇಕಾದ ತಕ್ಕ ಪ್ರತಿಫಲ ಸಿಗಬೇಕೆಂಬ ಕಾರಣಕ್ಕಾಗಿ ಒಂದಾಗಿದ್ದಾರೆ. ಮಲ್ಪೆಯ ಯಾಂತ್ರಿಕ ದೋಣಿಯಲ್ಲಿ ದುಡಿಯುವ ಕಲಾಶಿಗಳಿಗೆ ಬೋಟಿನಲ್ಲಿ  ಬಂದ ಆದಾಯದಲ್ಲಿ ಸಮರ್ಪಕವಾದ ಹಣ ಸಿಗುತ್ತಿಲ್ಲ ಎಂಬ ಆರೋಪ ಹಲವು ಕಳೆದ ನಾಲ್ವತ್ತು ವರ್ಷಗಳಿಂದ ಇದೆ.

ತಾವು ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತೇವೆ. ಆದ್ರೆ ನಮಗೆ ಸಿಗುವ ಹಣದಲ್ಲಿ ಖೋತಾ ಆಗುತ್ತಿದೆ ಎಂದು ಆಕ್ಷೇಪಿಸುತ್ತಲೆ ಬಂದಿದ್ದಾರೆ. ಚಾಲಕರನ್ನ ನಂಬಿ ಪ್ರತಿ ವರ್ಷ ಮೀನುಗಾರಿಕೆ ಆರಂಭದಲ್ಲಿ ಬಟ್ಟೆ ಬರೆ ಕಟ್ಟಿಕೊಂಡು ಹೊರಡುವ ಮೀನುಗಾರ(Fisherman)  ವಾಪಸ್ ಬರುತ್ತಾನೆಂಬ ನಂಬಿಕೆಯಿಲ್ಲ. ಕುಟುಂಬದವರು ದಿನಪೂರ್ತಿ ಪ್ರಾರ್ಥನೆ ಮಾಡಿಕೊಳ್ಳುತ್ತೆ ಇರುತ್ತಾರೆ. ಅದರಲ್ಲೂ ತೂಫಾನ್ ಆದ ಸಂದರ್ಭದಲ್ಲಿ ತಮ್ಮ ಮಕ್ಕಳ ಸುರಕ್ಷತೆಗಾಗಿ ದೇವರಿಗೆ ಹರಕೆ ಕಟ್ಟಿಕೊಳ್ಳುವವರಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದಿಂದ ಉಡುಪಿ ಜಿಲ್ಲೆಯ ಬೈಂದೂರುವರೆಗಿನ ಕಲಾಶಿಗಳು ಈಗ ಒಗ್ಗಟ್ಟಾಗಿದ್ದಾರೆ. ವೇದಿಕೆಯೊಂದನ್ನ ರಚಿಸಿಕೊಂಡು ಹಕ್ಕಿಗಾಗಿ ಹೋರಾಟಕ್ಕೆ ಸಿದ್ದರಾಗಿದ್ದಾರೆ. ಬೋಟಿನ ದುಡಿಮೆಯಲ್ಲಿ ದುಡಿಯುವ ಕಲಾಶಿಗಳಿಗೆ ಮಾಲೀಕರು ನೀಡುವ ಶೇಕಡವಾರು ಹಣ ಸರಿ ಹೊಂದುತ್ತಿಲ್ಲ. ಹೀಗಾಗಿ ಸರಿಪಡಿಸಿಕೊಡಿಸಿಕೊಡಬೇಕೆಂಬ ಒತ್ತಾಯವಿದೆ. ಶೇಕಡಾ 22ರಲ್ಲಿ ಚಾಲಕರ ಹಣವೂ ಸೇರಿರುವುದರಿಂದ ತಮಗೆ ಅನ್ಯಾಯವಾಗುತ್ತಿದೆ. ಅಲ್ಲದೆ ಕೊನೆಯ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗುತ್ತಿದೆ ಯಾಕೆ ಎಂಬುದು ಪ್ರಶ್ನೆ.

ತಮ್ಮ ಬೇಡಿಕೆ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಸರಿಪಡಿಸುವ ಭರವಸೆ ಮಾಲೀಕ ವರ್ಗದಿಂದ ಬಂದಿಲ್ಲ. ಹೀಗಾಗಿ ಕರಾವಳಿ ಮೀನುಗಾರ ಕಲಾಶಿಗಳ ಕ್ಷೇಮಾಭಿವೃದ್ಧಿ ಸಂಘದ ಮೂಲಕ ಹೋರಾಟಕ್ಕೆ ನಾಂದಿ ಹಾಡಿದ್ದಾರೆ.

ಕಾಲ ಬದಲಾದಂತೆ ಜಮಾನಾ ಬದಲಾಗಿದೆ. ಬೆಲೆ ಏರಿಕೆಯಿಂದಲೂ ಅಸಂಘಟಿತ ವಲಯದಲ್ಲಿ ದುಡಿಯವವರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಈಗೀನ ಬದಲಾವಣೆಗೆ ತಕ್ಕಂತೆ ಕಲಾಶಿಗಳಿಗೆ ಸ್ಪಂದಿಸಬೇಕಾಗುವ ಅವಶ್ಯಕತೆಯಿದೆ.

ಕೇವಲ ದುಡಿಮೆ ಹಣ ಮಾತ್ರವಲ್ಲ. ಹಗಲುರಾತ್ರಿ ತಮ್ಮ ಬೋಟಿನಲ್ಲಿ ಶ್ರಮಿಸುವ ಕಲಾಶಿಗಳಿಗೆ(Labours) ಮಾಲೀಕರು ಸುರಕ್ಷತೆ, ಭದ್ರತೆ  ನೀಡಬೇಕು. ಯಾಕಂದ್ರೆ ಅವರ ದುಡಿಮೆಯಿಂದಲೇ ನಿಮಗೆ ಹತ್ತಾರು ಬೋಟುಗಳನ್ನ ಮಾಡಿಕೊಳ್ಳಲು‌ ಸಾಧ್ಯವಾಗಿರುವುದು. ಹಾಗಾದ್ರೆ ಕಲಾಶಿಗಳ ಬಗ್ಗೆ ನಿರ್ಲಕ್ಷ್ಯ ಮಾಡದೇ ಗಮನಹರಿಸಿ. ಇಲ್ಲದಿದ್ದಲ್ಲಿ ಬಂದರಿನಲ್ಲಿರುವ ಯಾಂತ್ರಿಕ ದೋಣಿ ಮೀನುಗಾರಿಕೆ ಮೇಲೆ ಪರಿಣಾಮ ಬೀರಬಹುದು. ಸಮ ಪಾಲು ಸಮಬಾಳು ತಕ್ಷಣ ಅನ್ವಯವಾಗಲಿ ಎಂಬುದು ನಮ್ಮ ಕಳಕಳಿಯಾಗಿದೆ.

ಇದನ್ನು ಓದಿ : ಮೊದಲ ಬಾರಿ ಕಾರವಾರದಲ್ಲಿ ನಡೆದ  ಮೊಸರುಗಡಿಗೆ ಒಡೆಯುವ ರೋಚಕ ಸ್ಪರ್ದೆ.

ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಸು.ಪ್ರಮ್.ಸೋ  ಚಿತ್ರ.

ಯಲ್ಲಾಪುರದಲ್ಲಿ ಭೀಕರ ಅಪಘಾತ. ಮೂವರು ಸ್ಥಳದಲ್ಲಿ ಸಾವು. ಏಳು ಗಂಭೀರ