ಮಂಗಳೂರು(MANGLORE) : ಮಂಗಳೂರು ಮತ್ತು ಕೇರಳ(Mangalore to Keral) ನಡುವಿನ ರೈಲು ಹಳಿ(Railway Track) ತಪ್ಪಿಸಲು ಪ್ರಯತ್ನ ನಡೆದಿದೆ ಎಂದು ಕೆಲ ತಾಸುಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಮಂಗಳೂರಿನ ಉಳ್ಳಾಲ(Ullal) ತಾಲೂಕಿನ ತೊಕ್ಕೊಟ್ಟುವಿಲ್ಲಿ(Tokkottu) ಇಂದು ಬೆಳಿಗ್ಗೆ ಭಾರೀ ಆತಂಕ ಸೃಷ್ಟಿಯಾಗಿತ್ತು. ರೈಲು ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ಅಪರಿಚಿತರು ಪರಾರಿಯಾಗಿದ್ದರು. ಈ ಮಾರ್ಗದಲ್ಲಿ ಎರಡು ರೈಲುಗಳು ಚಲಿಸುವಾಗ ದೊಡ್ಡ ಶಬ್ದ ಕೇಳಿ ಸ್ಥಳೀಯರು ಆತಂಕಗೊಂಡಿದ್ದರು. ಅಲ್ಲದೇ ಕೆಲವು ಮನೆಗಳಲ್ಲಿಯೂ ಭಾರೀ ಕಂಪನ ಉಂಟಾಗಿತೆಂದು ಹೇಳಲಾಗಿತ್ತು. ರೈಲು ಅಪಘಾತವೆಂದು ಭಾವಿಸಿ ಸ್ಥಳೀಯರು ಹಳಿಯತ್ತ ದೌಡಾಯಿಸಿದಾಗ ಹಳಿ ಮೇಲೆ ಜಲ್ಲಿಕಲ್ಲುಗಳು ತುಂಡಾಗಿರುವುದು ಗೊತ್ತಾಗಿದೆ.

ರೈಲ್ವೇ ಪೊಲೀಸ್ ಠಾಣೆ(Railway police Station) ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ(Ullal police Station) ಸ್ಥಳೀಯರ ಮಾಹಿತಿ ನೀಡಿದಾಗ ಪೊಲೀಸರು ತನಿಖೆ ಶುರು ಮಾಡಿದ್ದರು. ರೈಲ್ವೇ ಹಳಿಗಳ ಮೇಲೆ ಮಕ್ಕಳು ಕಲ್ಲಿಟ್ಟಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ರೈಲ್ವೇ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ಹೆಂಡತಿ ಕೊಂದ ಗಂಡನಿಗೆ ಜೀವಾವಧಿ ಶಿಕ್ಷೆ

ಮೂಡಭಟ್ಕಳ ಬಳಿ ಟ್ಯಾಂಕರ್ ಪಲ್ಟಿ

ಯುವತಿಗೆ ಕೈಯಾರೆ ನೇಮಕಾತಿ ಪತ್ರ ನೀಡಿದ ಕುಮಾರಸ್ವಾಮಿ

ಮುರ್ಡೇಶ್ವರ ಮಂಗಳೂರಿನಲ್ಲಿ ಪ್ರವಾಸಿ ಬಂದರು