ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಧಾರವಾಡ(Dharwad) : ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ಶಾಸಕ ದಿನಕರ ಶೆಟ್ಟಿ(MLA Dinakar Shetty) ಅವರು ಈಗ ನಿರಾಳರಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿದ್ದ ಸೂರಜ್ ನಾಯ್ಕ(Suraj Naik) ಅವರು ದಾಖಲಿಸಿದ್ದ ಚುನಾವಣಾ ದೂರನ್ನು ರಾಜ್ಯ ಉಚ್ಛ ನ್ಯಾಯಾಲಯ(High Court) ವಜಾಗೊಳಿಸಿದೆ. ಬಿಜೆಪಿಯ ದಿನಕರ ಶೆಟ್ಟಿ ಅವರ ಆಯ್ಕೆ ಸಿಂಧು ಎಂದು ನ್ಯಾಯಾಲಯ ಹೇಳಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರು 59966 ಮತ ಹಾಗೂ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ 59293 ಮತ ಗಳಿಸಿದ್ದರು. ಒಟ್ಟು 673 ಮತಗಳ ಅಂತರದಿಂದ ದಿನಕರ ಶೆಟ್ಟಿ(Dinakar Shetty) ಅವರಿಗೆ ಗೆಲವು ಲಭಿಸಿತ್ತು.
ಈ ಗೆಲುವನ್ನು ಪ್ರಶ್ನಿಸಿ ಪರಾಭವ ಜೆಡಿಎಸ್ ಅಭ್ಯರ್ಥಿ(JDS Candidate) ಉಚ್ಛ ನ್ಯಾಯಾಲಯದಲ್ಲಿ ಎರಡು ವರ್ಷದ ಹಿಂದೆ ಚುನಾವಣಾ ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ಧಾರವಾಡ ಉಚ್ಛನ್ಯಾಯಾಲಯ(Dharwad Highcourt) ಸೂರಜ್ ಸೋನಿ ಅವರ ದೂರನ್ನು ವಜಾಗೊಳಿಸಿದೆ. ಶಾಸಕ ದಿನಕರ ಶೆಟ್ಟಿ ಪರವಾಗಿ ನ್ಯಾಯಾವಾದಿ ವಿವೇಕ ರೆಡ್ಡಿ ವಾದಿಸಿದ್ದರು.
2023 ರ ಚುನಾವಣೆಯ ಮತ ಏಣಿಕೆ ಸಂದರ್ಭದಲ್ಲಿ ಜೆಡಿಎಸ್-ಬಿಜೆಪಿ ಸಮಬಲದ ಮುನ್ನಡೆ ಸಾಧಿಸುತ್ತಾ 14 ಹಾಗೂ 15ನೇ ಸುತ್ತಿನ ಎಣಿಕೆಯಲ್ಲಿ ಜೆಡಿಎಸ್ ಕೊಂಚ ಮುನ್ನಡೆ ಕಂಡಿತ್ತು. ಜೆಡಿಎಸ್ ಕಾರ್ಯಕರ್ತರು ಇನ್ನೇನು ಪಟಾಕಿ ಹೊಡೆದು ಸಂಭ್ರಮಾಚರಣೆಗೆ ತಯಾರಿ ನಡೆಸಿದ್ದರು. ಎರಡು ಮತ ಯಂತ್ರಗಳ ತಾಂತ್ರಿಕ ತೊಂದರೆಯಿಂದಾಗಿ ವೋಟಿಂಗ್ ಸ್ಲಿಪ್ ಮರು ಎಣಿಕೆ ಮಾಡಬೇಕಿದೆ ಎಂಬ ಮಾಹಿತಿ ಬಂದಿದ್ದರಿಂದ ಜೆಡಿಎಸ್ ಕಾರ್ಯಕರ್ತರು ನಿರಾಶರಾಗಿದ್ದರು. ಕೊಂಚ ಸಮಯ ತೆಗೆದುಕೊಂಡಿದ್ದರಿಂದ ಫಲಿತಾಂಶ ಘೋಷಣೆ ವಿಳಂಭವಾಗಿತ್ತು.
ಮತ ಎಣಿಕೆಯಲ್ಲಿ ಅನ್ಯಾಯವಾಗಿದೆ ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ಕರ್ನಾಟಕ ಉಚ್ಚನ್ಯಾಯಾಲಯ ಅವರ ಪ್ರಕರಣವನ್ನು ಖುಲಾಸೆಗೊಳಿಸಿದೆ. ಶಾಸಕ ದಿನಕರ ಶೆಟ್ಟಿ ಅವರು ಈಗ ನಿರಾಳರಾಗಿದ್ದಾರೆ. ಈ ಹಿಂದೆ ಸಹ ದಿನಕರ ಶೆಟ್ಟಿ ಅವರು 20 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಆಗಲು ಕೋರ್ಟ್ ತೀರ್ಪು ನೀಡಿದ್ದನ್ನು ಸ್ಮರಿಸಬಹುದು.
ಇದನ್ನು ಓದಿ : ಯುಟ್ಯೂಬರ್ ಮುಕಳೆಪ್ಪ ವಿರುದ್ದ ಪ್ರಮೋದ್ ಮುತಾಲಿಕ್ ಆಕ್ರೋಶ.
ಅಕ್ಟೋಬರ್ 2ರಿಂದ 5ರವರೆಗೆ ಕಾರವಾರದಲ್ಲಿ ಕರ್ನಾಟಕ ಪ್ರಾಂತೀಯ ಯುವ ಸಮ್ಮೇಳನ ಯುವ ಜನೋತ್ಸವ.
ಸಚಿವರ ಆಪ್ತ ಸಹಾಯಕ ಎಂದು ಜಿಲ್ಲಾದಿಕಾರಿಗೆ ವಂಚನೆ. ಕಾರವಾರ ವಿದ್ಯಾರ್ಥಿ ಬಂಧನ