ಇ ಸಮಾಚಾರ ಡಿಜಿಟಲ್ ನ್ಯೂಸ್(esamacharadigital news) ಕೊಳ್ಳೆಗಾಲ(Kollegala) : ಇಷ್ಟವಿಲ್ಲದ ಮದುವೆಗೆ ವಧುವೇ ವರನನ್ನ ಮುಗಿಸಲು ಸಂಚು ರೂಪಿಸಿದ ಘಟನೆ ಬೆಳಕಿಗೆ ಬಂದಿದೆ. ಕೊಳ್ಳೆಗಾಲದಲ್ಲಿ ಮದುವೆ(Kollegal Marriage) ಮಂಟಪಕ್ಕೆ ಬರುತ್ತಿದ್ದ ವರನಿಗೆ ಚಾಕು ಇರಿತ ಪ್ರಕರಣಕ್ಕೆ ತಿರುವು ಸಿಕ್ಕಿದೆ.
ಸ್ವತಃ ಮದುವೆಯಾಗಬೇಕಿದ್ದ ವಧುವೇ ತನ್ನ ಪ್ರಿಯಕರನ ಮೂಲಕ ಚಾಕು ಇರಿಸಿದ್ದಾಳೆ. ಡಿ. 30ರಂದು ಕುಣಗಳ್ಳಿ ಗ್ರಾಮದ(Kunagalli Village) ರವೀಶ್ ಮತ್ತು ನಯನ ವಿವಾಹ ನಡೆಯಬೇಕಿತ್ತು. ರವೀಶ್ ಹೊಸ ಜೀವನಕ್ಕೆ(New Life) ಕಾಲಿಡುವ ಸಂತೋಷದಲ್ಲಿದ್ದರು. ಮುದುವೆಯ ಮುಂಚಿನ ದಿನ ರಿಸೆಪೈನ್ಗೆ ರವೀಶ್ ಕುಟುಂಬದವರು ಸಂಬಂಧಿಕರು ಕಲ್ಯಾಣ ಮಂಟಪದತ್ತ ಹೊರಟಿದ್ದರು. ಕೊಳ್ಳೇಗಾಲದ ವೆಂಕಟೇಶ್ವರ ಮಂಟಪಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ಗುಂಪು ರವೀಶ್ ಕಾರನ್ನು ಅಡ್ಡಗಟ್ಟಿ ಗಲಾಟೆ ಮಾಡಿ ವರನಿಗೆ ಚಾಕು ಇರಿದು ಪರಾರಿಯಾಗಿತ್ತು. ಗಾಯಗೊಂಡಿದ್ದ ವರ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ(Police Station) ದೂರು ದಾಖಲಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ವಧುವಿನ ಬಗ್ಗೆ ಸಂಶಯ ಬಂದು ಪೊಲೀಸರು ವಧು ನಯನ ಕಾಲ್ ರೆಕಾರ್ಡ್(Cal Record) ಚೆಕ್ ಮಾಡಿದ್ದಾರೆ. ಹೀಗಾಗಿ ಪ್ರಕರಣದ ಹಿಂದೆ ಆಕೆ ಕೈವಾಡ ಇರುವುದು ಗೊತ್ತಾಗಿದೆ. ಈಕೆಗೆ ಮದುವೆ ಇಷ್ಟವಿರಲಿಲ್ಲ. ಅದೇ ಊರಿನ ದರ್ಶನ್ ಎನ್ನುವಾತನನ್ನು ಆಕೆ ಪ್ರೀತಿಸುತ್ತಿದ್ದಳು(Love). ದರ್ಶನ್ ಜತೆ ವಿವಾಹ ಮಾಡಿಕೊಡಲು ಆಕೆಯ ಮನೆಯವರು ನಿರಾಕರಿಸಿದ್ದರು.
ಹೀಗಾಗಿ ಇಷ್ಟವಿಲ್ಲದೆ ರವೀಶ್ ಜತೆ ಮದುವೆಗೆ ತಯಾರಿ ನಡೆಸಿದ್ದರು. ನಯನ ತನ್ನ ತಂಗಿಯ ಫೋನ್ನಿಂದ ದರ್ಶನ್ಗೆ ಕಾಲ್ ಮಾಡಿ ರವೀಶ್ನನ್ನು ಕೊಲ್ಲು ಎಂದು ಹೇಳಿದ್ದಳು. ಇದೀಗ ನಯನ ಹಾಗೂ ದರ್ಶನ್ ಅವರನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ನಡೆಸಲಾಗಿದೆ.
