ಕಾರವಾರ : ಕಪ್ಪೆಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಬಸ್ ನ್ನ ಕಾರವಾರ ವಲಯದ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

ಬಸ್ ಚಾಲಕ ಮತ್ತು ಮಾಲಕ ಸಿದ್ದೇಶ್ ಹಾಗೂ ಕ್ಲಿನರ್ ಜಾನು ಬಂಧಿತರು. ನಗರದ ರಾಷ್ಟೀಯ ಹೆದ್ದಾರಿ 66 ಕಾಳಿ ಸೇತುವೆ ಬಳಿ ಕಾದು ಕುಳಿತಿದ್ದ ಸಿಬ್ಬಂದಿಗಳು ಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. GA-08 V- 5859 ನೋಂದಣಿಯ ಖಾಸಗಿ ಬಸ್ನಲ್ಲಿ ಕಪ್ಪೆಗಳನ್ನ ಸಾಗಿಸಲಾಗುತಿತ್ತು. ಸಿಬ್ಬಂದಿಗಳು ಬಸ್ ತಡೆದಾಗ ಚಾಲಕ ಮೊದಲು ನಕಾರಾ ಮಾಡಿದ್ದಾನೆ. ಬಳಿಕ ಇಲಾಖೆಯವರೆಂದು ಹೇಳಿದಾಗ ತಪಾಸಣೆಗೆ ಅವಕಾಶ ನೀಡಿದ್ದಾನೆ. ಈ ಸಂದರ್ಭದಲ್ಲಿ ಬಸ್ ಡಿಕ್ಕಿಯಲ್ಲಿ  ಚೀಲದೊಳಗೆ 42 ಬಾರೀ ಗಾತ್ರದ ಕಪ್ಪೆ ಇರೋದು ಬೆಳಕಿಗೆ ಬಂದಿದೆ.

ತಕ್ಷಣ ಚಾಲಕ ಮತ್ತು ಕ್ಲಿನರ್ ನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಕಾರವಾರ ವಲಯ ಅರಣ್ಯಧಿಕಾರಿ ವಿಶ್ವನಾಥ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

ಗೋವಾದಲ್ಲಿಕಪ್ಪೆಗಳಿಗೆಬೇಡಿಕೆ : ದೇಶದಲ್ಲಿ 400 ಜಾತಿಯ ಕಪ್ಪೆಗಳಿದ್ದು ಇದು (Indian bull frog)ಗೂಳಿ ಕಪ್ಪೆಗಳಾಗಿವೆ. ಗೋವಾದಲ್ಲಿ  ಕಪ್ಪೆಗಳ ಆಹಾರಕ್ಕೆ ಬೇಡಿಕೆ ಇದ್ದು, ಮಳೆಗಾಲದಲ್ಲಿ ಕಾರವಾರ ಭಾಗದಿಂದ ಹೆಚ್ಚಿನ ಕಪ್ಪೆಗಳು ಗೋವಾಕ್ಕೆ ಸಾಗಿಸಲಾಗುತ್ತಿದೆ ಎಂಬ ಅರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಪ್ಪೆಗಳ ಅಕ್ರಮ ಸಾಗಾಟ ಮತ್ತು ಮಾರಾಟ ಜೋರಾಗಿದೆ.

ವನ್ಯಜೀವಿ ಕಾಯ್ದೆ ಪ್ರಕಾರ ಇವುಗಳನ್ನ ಹಿಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಿದೆ. ಮೂರರಿಂದ ಏಳು ವರ್ಷದವರೆಗೆ ಶಿಕ್ಷೆಯಿದೆ. ಆದರೂ ಕಪ್ಪೆ ಸಾಗಾಟದಾರರು ಕದ್ದು ಮುಚ್ಚಿ ದಂದೆ ನಡೆಸುತ್ತಿದ್ದಾರೆ.