ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಬ್ರೇಕ್ ಫೇಲಾಗಿ(Break Fail) ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಟೈಲರಿಂಗ್ ಸಹಿತ ಬಟ್ಟೆ ಅಂಗಡಿಗೆ(Cloth Shop) ನುಗ್ಗಿದ ಘಟನೆ ಶುಕ್ರವಾರ ರಾತ್ರಿ ನಗರದ ಸುಭಾಷ್ ನಗರದಲ್ಲಿ(Subhas nagar) ಸಂಭವಿಸಿದೆ.
KA : 27, C: 1808 ಸಂಖ್ಯೆಯ ಲಾರಿಯೇ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಟೈಲರಿಂಗ್(Tailoring) ಸಹಿತ ಬಟ್ಟೆ ಅಂಗಡಿಗೆ ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಯಿಂದಾಗಿ ಟೈಲರಿಂಗ್ ಸಹಿತ ಬಟ್ಟೆ ಅಂಗಡಿಗೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು(Town Police Station) ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಘಟನೆ ನಡೆದಾಕ್ಷಣ ಸುದ್ದಿ ಕೇಳಿದ ನಾಗರಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ.
ಇದನ್ನು ಓದಿ : ದಾರಿ ಜಗಳದಲ್ಲಿ ಮಹಿಳೆ ಮೇಲೆ ಕತ್ತಿ ಬೀಸಿದ ಇಬ್ಬರಿಗೆ ಶಿಕ್ಷೆ.
ಆರಿತು 46 ವರ್ಷ ಬೆಳಗಿದ ಚಿಗಳ್ಳಿ ದೀಪ ! ಕಾದಿದೆಯಾ ಕಂಠಕ.