ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ(State Government Employees) ಕ್ಯಾಂಟಿನ್ ವ್ಯವಸ್ಥೆ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಷಡಕ್ಷರಿ ಹೇಳಿದ್ದಾರೆ.
ಕಾರವಾರದಲ್ಲಿ ಸರ್ಕಾರಿ ನೌಕರರ ಸಂಘದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಇನ್ನು ಒಂದೆರಡು ತಿಂಗಳಲ್ಲಿ ಆರಂಭಿಸುತ್ತಿದ್ದೇವೆ. ತಮ್ಮ ಸಂಘಟನೆ ಪ್ರಯತ್ನದಿಂದ ಇವು ಆಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಹ ಎಲ್ಲಾ ನೌಕರರಿಗೂ ಮನೆಯಲ್ಲಿ ಬಳಸುವ ಎಲ್ಲಾ ವಸ್ತುಗಳನ್ನು ಶೇಕಡಾ 20ರಿಂದ 25 ರಷ್ಟು ಡಿಸ್ಕೌಂಟ್ ದರದಲ್ಲಿ ವಿತ್ ಕ್ರೆಡಿಟ್, ಅಡ್ವಾನ್ಸ್ ರೂಪದಲ್ಲಿ ಖರೀದಿಸಬಹುದಾಗಿದೆ.
ಎಂಎಸ್ಐಎಲ್(MSIL) ಸಂಸ್ಥೆ ಮೂಲಕ ಇಡೀ ರಾಜ್ಯದಲ್ಲಿ ಸರ್ಕಾರಿ ನೌಕರರು, ನಿವೃತ್ತ ನೌಕರರು, ಬೋರ್ಡ್ ಕಾರ್ಮಿಕರು, ಹಂಗಾಮಿ ನೌಕರರು, ಗುತ್ತಿಗೆ ನೌಕರರು ಸೇರಿ ಸುಮಾರು 50 ಲಕ್ಷ ಜನರಿಗೆ ಈ ಯೋಜನೆ ಅನ್ವಯವಾಗುತ್ತೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಸಚಿವ ಎಂ ಬಿ ಪಾಟೀಲ್ ಹಾಗೂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿದರು.
ಕೇಂದ್ರ ಸರ್ಕಾರದ ಹೊಸ ಪಿಂಚಣಿ ಯೋಜನೆಯನ್ನ(NPS) ಹಳೆ ಪಿಂಚಣಿ ಯೋಜನೆಯನ್ನಾಗಿ(OPS) ಮಾಡಲಾಗುವುದು. ಅದರ ರಿಪೋರ್ಟ್ ಅಂತಿಮ ಅಂತಕ್ಕೆ ಬಂದಿದೆ. ಇನ್ನೂ ನೌಕರರ ಆರೋಗ್ಯ ದೃಷ್ಟಿಯಿಂದ 350 ರೂ ಕುಟುಂಬದ ನಾಲ್ಕು ಜನರಿಗೆ ಟ್ರಿಟ್ಮೆಂಟ್ ಕೊಡಿಸುವ ಯೋಜನೆಯಿದ್ದು ಕುಟುಂಬದ ನಾಲ್ವರು ಯಾವುದೇ ಗಂಭೀರ ಕಾಯಿಲೆಗಳಿದ್ದರೇ ರೂ 50 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಸಿ ಷಡಕ್ಷರಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇದನ್ನು ಓದಿ : ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ ಬಯಲು – ಇಬ್ಬರು ಆರೋಪಿತರ ಬಂಧನ