ಕಾರವಾರ(KARWAR) : ದೇಶದ 32 ಕಡಲ ತೀರಗಳಲ್ಲಿ ಇಂದು ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆ(INTERNATIONAL BEACH CLEANING DAY) ಅಂಗವಾಗಿ ಸ್ವಚ್ಛತೆ ನಡೆಸಲಾಯಿತು.
ಭಾರತೀಯ ತಟ ರಕ್ಷಕ ಪಡೆ(INDIAN COAST GUARD), ಅರಣ್ಯ ಇಲಾಖೆ(FOREST GUARD), ಕಾರವಾರದ ಕಡಲ ಜೀವ ಶಾಸ್ತ್ರ(MARINE BIOLOGY) ವಿಭಾಗದ ವತಿಯಿಂದ ಶನಿವಾರ ಕಾರವಾರದ ರವೀಂದ್ರನಾಥ್ ಟ್ಯಾಗೋರ ಕಡಲತೀರದಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು.
ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ(DC LAKSHMIPRIYA), ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ(SP NARAYAN), ಉಪಸಂರಕ್ಷಣಾಧಿಕಾರಿ(DFO) ರವಿಶಂಕರ್ ಕಸ ಹೆಕ್ಕಿದರು.
ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಪ್ರತಿ ವರ್ಷವೂ ಇಂಡಿಯನ್ ಕೋಸ್ಟ್ ಗಾರ್ಡ್ ವತಿಯಿಂದ ವಿವಿಧ ಕಡಲತೀರದ ಸ್ವಚ್ಛತೆ ನಡೆಸಲಾಗುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಕಡಲ ಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ನೂರಾರು ಸಂಖ್ಯೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ದೇಶದಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ (SWABHAVA SWACHHATE SAMSKAR SWACHHATE) ಘೋಷಣೆಯಡಿಯಲ್ಲಿ ಅಭಿಯಾನ ನಡೆಯುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲೂ ಸಹ ಕಾರ್ಯಕ್ರಮದಲ್ಲಿ ಜನರು ಪಾಲ್ಗೊಳ್ಳುತ್ತಿದ್ದಾರೆ.
ಇದನ್ನು ಓದಿ : ಕುಖ್ಯಾತ ಕಳ್ಳರು ಪೊಲೀಸ್ ಬಲೆಗೆ