ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡ(Mundgodu) : ಸ್ಟೇರಿಂಗ್ ತುಂಡಾಗಿ(Steering Cut) ಬಸ್ಸೊಂದು ವಿದ್ಯುತ್ ಕಂಬಕ್ಕೆ(Electric pole) ಢಿಕ್ಕಿ ಹೊಡೆದು ಗಟಾರಕ್ಕೆ ಬಿದ್ದ ಘಟನೆ ಮುಂಡಗೋಡ ತಾಲೂಕಿನ ಮಳಗಿ ಬಳಿ(Mundgod malagi) ಸಂಭವಿಸಿದೆ.
ಘಟನೆಯಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಶಿರಸಿಯಿಂದ ಹುಬ್ಬಳ್ಳಿ(Sirsi to Hubli) ಕಡೆಗೆ ಬಸ್ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಬಸ್ ನ(Government Bus) ಸ್ಟೀರಿಂಗ್ ತುಂಡಾಗಿ, ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಗಟಾರಕ್ಕೆ ಬಿದ್ದಿದೆ.
ಈ ಸರ್ಕಾರಿ ಬಸ್‌ನಲ್ಲಿ ಸುಮಾರು 50 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಎಲ್ಲರೂ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದಾಕ್ಷಣ ಸ್ಥಳೀಯರು ತಕ್ಷಣ ಧಾವಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ.
ಇದನ್ನು ಓದಿ : ಚಪಲ ಚೆನ್ನಿಗ ರಾಮಚಂದ್ರ ಎಸ್ಕೇಪ್. ಜಸ್ಟ್ ಮಿಸ್. ಉಪನ್ಯಾಸಕನಿಗೆ ಕಾರು ವ್ಯವಸ್ಥೆ ಮಾಡಿಸಿದ್ದ ಇಬ್ಬರು ವಶಕ್ಕೆ.
ಸಾಧಕ ಮೀನುಗಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ರಫೆಲ್ ಯುದ್ದ ವಿಮಾನದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು.
ಎಮ್ಮೆ ಅಡ್ಡ ಬಂದು ಎಂಬಿಬಿಎಸ್ ವಿದ್ಯಾರ್ಥಿ ದುರ್ಮರಣ. ಇನ್ನೋರ್ವ ಗಂಭೀರ.

