ಬೆಂಗಳೂರು(Bangalore) : ಕರ್ನಾಟಕ ಜಾನಪದ ಅಕಾಡೆಮಿಯು(Karnataka Janapada Academi) 2023 ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಗಳನ್ನು ಸೋಮವಾರ ಪ್ರಕಟಿಸಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಒಬ್ಬೊಬ್ಬ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂದರೆ ಒಟ್ಟು 30 ಕಲಾವಿದರು 2023ರ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಈರಯ್ಯಗೆ ಪ್ರಶಸ್ತಿ : ಉತ್ತರಕನ್ನಡ ಜಿಲ್ಲೆಯ(UTTARKANNADA) ಭಟ್ಕಳ ತಾಲೂಕಿನಲ್ಲಿರುವ (BHATKAL) ವಿಶಿಷ್ಟ ಕಲಾಪ್ರಕಾರವನ್ನ ಗುರುತಿಸಿ ಸುಪ್ರಸಿದ್ಧ ಕಾರಿನ್ ಮನೆ/ಹೌಂದೇರಾಯನ ಕುಣಿತಗಾರರಾಗಿರುವ ಈರಯ್ಯ ಬೇಡುಮನೆ ಅವರಿಗೆ ಈ ಬಾರೀ ಪ್ರಶಸ್ತಿ ಲಭಿಸಿದೆ.
ಕಾರಿನ್‌ಮನೆ ಕುಣಿತ(Carinmane Dance) ಮತ್ತು ಹೌಂದೇರಾಯನ ಕುಣಿತದಲ್ಲಿ (Hounderay dance) ಈರಯ್ಯ ಅವರು ಸುಮಾರು 50 ವರ್ಷಗಳಿಂದ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಪರಿಶಿಷ್ಟ ಸಮುದಾಯದವರಾದ(Scheduled community) ಅವರು ಕುಣಿತಗಾರರೆಂದೇ ಪ್ರಸಿದ್ದಿ ಪಡೆದವರು.
ವಂಶಪಾರಂಪಾರಿಕವಾಗಿ ಬಂದ ಈ ಆಚರಣಾತ್ಮಕ ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ಕಲಾ ಪ್ರಕಾರವಾಗಿದೆ. ಊರಿನ ಹಬ್ಬ ಜಾತ್ರೆ ಮತ್ತು ವಿಶೇಷ ಸಂದರ್ಭಗಳಲ್ಲಿ ಡೋಲು/ಡೊಳ್ಳು ಲಯಕ್ಕೆ ಕುಣಿಯುತ್ತಾರೆ. ಸುಮಾರು 10 ರಿಂದ 12 ಗಂಟೆಗಳ ಕಾಲ ನಿರಂತರವಾಗಿ ಕುಣಿಯುವ ಇವರ ಶಕ್ತಿ ಎಂತಹವರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ತಾಲೂಕಿನಾದ್ಯಂತ ಎಲ್ಲೇ ದೈವಾರಾಧನೆಗಳಿದ್ದರೂ ಅಲ್ಲಿ ಈರಯ್ಯ ಇರಲೇ ಬೇಕು. ಸಾಂಪ್ರದಾಯಿಕವಾಗಿ ದೈವಾಚರಣೆಗಳ ಸಂದರ್ಭಗಳಲ್ಲಿ ಮಾತ್ರ ಆಚರಿಸಿಕೊಂಡು ಬರುತ್ತಿದ್ದ ಅಪರೂಪದ ಈ ಕುಣಿತವನ್ನು ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕವಾಗಿ ವಿವಿಧ ವೇದಿಕೆಗಳಲ್ಲಿ ಕೂಡ ಪ್ರದರ್ಶನವನ್ನು ಮಾಡುತ್ತಾ ಬರುತ್ತಿದ್ದಾರೆ. ಇದೊಂದು ಮೇಳದ ಸ್ವರೂಪದಲ್ಲಿರುವ ಕುಣಿತ, ಹತ್ತಾರು ಡೊಳ್ಳುಗಳ ಹಬ್ಬರಕ್ಕೆ ಈ ಕುಣಿತ ವಿಶೇಷ ಮೆರಗನ್ನು ಕೊಡುತ್ತದೆ. ಡೊಳ್ಳುಗಳ ಹಬ್ಬರದ ಮಧ್ಯದಲ್ಲಿ ದೈವಗಳನ್ನು ಸ್ತುತಿಸುತ್ತಾ ಸಂಪ್ರೀತಿಗೊಳಿಸಲು ಕುಣಿಯುವುದು ಮತ್ತೊಂದು ವಿಶೇಷ.
ಉತ್ತರಕನ್ನಡ ಜಿಲ್ಲೆಯಲ್ಲಿ ಜರಗುವ ಅನೇಕ ಹಬ್ಬ ಜಾತ್ರೆ(Festival Jatre) ಮತ್ತು ಸರಕಾರದ ಪ್ರಾಯೋಜನೆಯಲ್ಲಿ ಜರಗುವ ಅನೇಕ ಕಾರ್ಯಕ್ರಮಗಳಲ್ಲೂ ಕಾರಿನ್‌ಮನೆ ಕುಣಿತ ಪ್ರಸಿದ್ದಿಯನ್ನು ಹೊಂದಿದೆ. ಇಂದಿಗೂ ಕಾರಿನ್‌ಮನೆ ಕುಣಿತ ನೋಡಲು ಸುತ್ತಮುತ್ತಲ ಊರುಗಳಿಂದ ಜನ ಜಾತ್ರೆಯೇ ನೆರದಿರುತ್ತದೆ. ಅತ್ಯಂತ ಶಕ್ತಿ ಬೇಡುವ ಈ ಕುಣಿತವನ್ನು ತುಂಬಾ ಭಕ್ತಿ ಶ್ರದ್ದೆ ಮತ್ತು ನಿಷ್ಠೆಯಿಂದ ಮಾಡಿಕೊಂಡು ಬರುತ್ತಿರುವ ಈರಯ್ಯ ಅವರಿಗೆ ಈ ಬಾರಿಯ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಪರಿಶಿಷ್ಟ ಸಮುದಾಯದ ಹಿರಿಯರಿಗೆ ಪ್ರಶಸ್ತಿ ಬಂದಿರುವುದಕ್ಕೆ ಸಚಿವ ಮಂಕಾಳ್ ವೈದ್ಯ, ಹಿರಿಯರಾದ ಲಚ್ಮಯ್ಯ ಸಿದ್ದನಮನೆ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನು ಓದಿ : ಮನೆ ಮುಂದಿನ ಕಾಡಿನಲ್ಲಿ ಮಹಿಳೆ ಅಸ್ಥಿಪಂಜರ ಪತ್ತೆ
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಹೃದಯಘಾತದಿಂದ ಸಾವು