ಕಾರವಾರ(KARWAR) : ಭಾರತೀಯ ನೌಕಾಪಡೆ(Indian Navy) ದಿವಸದ ಅಂಗವಾಗಿ ಏರ್ಪಡಿಸಿದ ಕಾರವಾರ ರನ್ ಮತ್ತು ಟ್ರೈಥ್ಲಾನ್(Karwar Run & Traithlon) ಸ್ಪರ್ಧೆಯಲ್ಲಿ ಕಾರವಾರದ ಸುದರ್ಶನ್ ಪಿ ತಾಂಡೇಲ್ ರನ್ನರ್ಸ್ ಅಪ್ ಪ್ರಶಸ್ತಿ ಗಳಿಸಿದ್ದಾರೆ.

ಭಾನುವಾರ ಅರಗದ ನೌಕಾ ನೆಲೆಯಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಐದು ಕಿಲೋಮೀಟರ್ (5K) ಓಟದ ಸ್ಪರ್ಧೆಯಲ್ಲಿ ಒಟ್ಟು ಸುಮಾರು 1500 ಸ್ಪರ್ದಿಗಳು ಭಾಗವಹಿಸಿದ್ದರು. ಕಳಸವಾಡ ನಿವಾಸಿ ಸುದರ್ಶನ್ ತಾಂಡೇಲ್ ಅವರು 25ನಿಮಿಷದೊಳಗೆ ಐದು ಕಿಲೋಮೀಟರ್ ಪೂರೈಸಿದ್ದಾರೆ.

ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಉತ್ತಮ ಈಜು ಪಟುವಾಗಿ ಹಲವು ಬಾರೀ ಸಾಧನೆ ಮಾಡಿದ್ದರು. ಅವರ ನಿರಂತರ ಸಾಧನೆಗೆ ಕಾರವಾರದ ಅವರ ಗೆಳೆಯರ ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ.