ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಬಾದಾಮಿಯಿಂದ ಧರ್ಮಸ್ಥಳಕ್ಕೆ(Badami to Dharmasthala) ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್(KSRTC Bus) ಪಲ್ಟಿಯಾಗಿರುವ ಘಟನೆ ಹೊನ್ನಾವರ(Honnavar) ತಾಲೂಕಿನ ಸೂಳೆಮೂರ್ಕಿ ಕ್ರಾಸ್(Soolemurki Cross) ಬಳಿ ಸಂಭವಿಸಿದೆ.
ಅಪಘಾತದಲ್ಲಿ ಬಸ್‌ನಲ್ಲಿದ್ದ 29 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಹೊನ್ನಾವರ ಸರಕಾರಿ ಆಸ್ಪತ್ರೆಗೆ(Honnavar Government Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಅದೃಷ್ಟವಶಾತ್ ಅಪಘಾತದಲ್ಲಿ ಗಂಭೀರ ಅನಾಹುತ ತಪ್ಪಿದೆ. ಕೆಲ ದಿನಗಳ ಹಿಂದೆ ಇದೇ ಸ್ಥಳದಲ್ಲಿ ಅಪಘಾತವಾಗಿದ್ದು, ಮತ್ತೆ ಮತ್ತೆ ಅಪಘಾತ ಸಂಭವಿಸುತ್ತಿದೆ.
ಇದನ್ನು ಓದಿ : ಮಲ್ಪೆ ಮೀನುಗಾರಿಕೆ ಬೋಟ್ ಗೋವಾದಲ್ಲಿ ವಶಕ್ಕೆ . ಕಠಿಣ ಕ್ರಮ ಕೈಗೊಳ್ಳಲು ಮುಂದಾದ ಅಧಿಕಾರಿಗಳು.
ಕಾರವಾರದಲ್ಲಿ ಅಕ್ರಮ ಗೋ ಸಾಗಾಟ. ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದ ಸ್ಥಳೀಯರು. ಪೊಲೀಸ್ ವಶಕ್ಕೆ.

