ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿವಮೊಗ್ಗ(Shivamoga) : ಮೊಬೈಲ್ ಜಾಸ್ತಿ ನೋಡಬೇಡ ಎಂದು ತಾಯಿ ಬುದ್ದಿ ಹೇಳಿದ್ದಕ್ಕೆ ಮನನೊಂದ ಪದವಿ ವಿದ್ಯಾರ್ಥಿನಿಯೊಬ್ಬಳು  ವಿಷ ಸೇವಿಸಿ  ಸಾವನ್ನಪ್ಪಿದ ಘಟನೆ ನಡೆದಿದೆ. ಇಲ್ಲಿನ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆಕೆ ಕೊನೆಯುಸಿರೆಳೆದಿದ್ದಾಳೆ.

ಹಾರನಹಳ್ಳಿಯ ಧನುಶ್ರೀ (20) ಮೃತ ದುರ್ದೈವಿ. ಓದೋದು  ಬಿಟ್ಟು ಮೊಬೈಲ್‌ ಹಿಡಿದುಕೊಂಡಿದ್ದಕ್ಕೆ ತಾಯಿ ಗದರಿಸಿದ್ದಾರೆ. ಇದರಿಂದ ಮನನೊಂದು ಧನುಶ್ರೀ ಕಳೆನಾಶಕ ಸೇವಿಸಿದ್ದಳು. ಕೂಡಲೆ ಆಕೆಯನ್ನು ಆಯನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂರು ದಿನಗಳ ಹಿಂದೆ ಕಳೆನಾಶಕ ಸೇವಿಸಿದ್ದ ಧನುಶ್ರೀ ಗುರುವಾರ ಕೊನೆ ಉಸಿರು ಎಳೆದಿದ್ದಾಳೆ. ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಟಿವಿ ನೋಡಬೇಡ ಎಂದು ಅಜ್ಜಿ ಬುದ್ದಿವಾದ ಹೇಳಿದ್ದಕ್ಕೆ ವಾರದ ಹಿಂದೆ ಶಿವಮೊಗ್ಗದ ಸೂಳೆಬೈಲಿನಲ್ಲಿ 16 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಳು. ಇಂದು ಮತ್ತೊರ್ವ  ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿಯಾಗಿದೆ.

ಇದನ್ನು ಓದಿ,: ಅಮೇರಿಕಾ ಅಧ್ಯಕ್ಷರಿಗೆ ಸಂಚು ರೂಪಿಸಿದ ಭಟ್ಕಳದ ಮೂವರಿಗೆ ಶಿಕ್ಷೆ

ಭಟ್ಕಳದಲ್ಲಿ ಬೈಕ್ ಕದ್ದು ಹೆದರಿ ಮತ್ತೆ ಬಿಟ್ಟು ಹೋದ ಕಳ್ಳ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ. ನಾಲ್ವರ ದುರ್ಮರಣ.