ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನಗರದ ಸವಿತಾ ಹೋಟೆಲ್ ಸಮೀಪ ನಿಲ್ಲಿಸಿದ್ದ ಮಾರುತಿ ಸುಜುಕಿ ರಿಡ್ಜ್(Maruti Suzuki Ritz) ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಘಟನೆ ಗಮನಿಸಿದ ಕೂಡಲೇ ಹತ್ತಿರದ ಹೂವು ಹಾಗೂ ಹಣ್ಣು ಅಂಗಡಿಗಳಲ್ಲಿದ್ದ ನೀರನ್ನು ಬಳಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದ್ದಾರೆ.
ನಂತರ ತಕ್ಷಣವೇ ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು. ಯಾವುದೇ ಜೀವಹಾನಿ ಸಂಭವಿಸದೇ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿ ನೋಂದಣಿಯ(Belagavi Registration) ಈ ಕಾರಿನ ಮಾಲೀಕ ಮಹಮ್ಮದ್ ಗೌಸ್ ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದು, ಕಾರು ಮನೆ ಬಾಡಿಗೆದಾರರ ಬಳಕೆಗೆ ನೀಡಲಾಗಿತ್ತು. ರಿಪೇರಿ ಮಾಡಿಕೊಂಡು ಮನೆಗೆ ತರುತ್ತಿರುವ ಸಂದರ್ಭದಲ್ಲಿ ಕಾರನ್ನು ಸವಿತಾ ಸರ್ಕಲ್ ಬಳಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿರುವುದು ತಿಳಿದುಬಂದಿದೆ.
ಹಠಾತ್ ಬೆಂಕಿ ಕಾಣಿಸಿಕೊಂಡ ಕಾರಣಕ್ಕೆ ನಿಖರ ಕಾರಣ ಸ್ಪಷ್ಟವಾಗದಿದ್ದರೂ, ತಾಂತ್ರಿಕ ದೋಷವೇ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ಅಗ್ನಿಶಾಮಕ ದಳ(Fire Brigade) ಹಾಗೂ ಪೊಲೀಸರು(Police) ಮುಂದಿನ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಬಿಸಿಯೂಟ ಸೇವಿಸಿದ್ದ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ. ಆಸ್ಪತ್ರೆಗೆ ದಾಖಲು
ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ – ನಾಪತ್ತೆಯಾಗಿದ್ದ ಹೊನ್ನಾವರದ ದಂಪತಿ ಪತ್ತೆ
