ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ತಾಲೂಕಿನ ಮಾವಿನಕುರ್ವೆ(Mavinkurve) ಗ್ರಾಮ ಪಂಚಾಯತ ವ್ಯಾಪ್ತಿಯ ತಲಗೋಡ ಕೊಂಡರಕೇರಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಸದರಿ ಭಾಗದಲ್ಲಿ ಗುಡ್ಡ ಕುಸಿಯುವ ಸಂಭವ ಇದೆ.  ಸಾರ್ವಜನಿಕ ಸುರಕ್ಷತಾ ಹಿತದೃಷ್ಟಿಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ  ಮುನ್ನೆಚ್ಚರಿಕೆ ವಹಿಸಲಾಗಿದೆ.

ಉತ್ತರಕನ್ನಡ(Uttarkannada) ಜಿಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ ವ್ಯಾಪ್ತಿಯ ತಲಗೋಡ ಕೊಂಡರಕೇರಿ ರಸ್ತೆಯಲ್ಲಿ ವಾಹನ/ಸಾರ್ವಜನಿಕ ಸಂಚಾರವನ್ನು ದಿನಾಂಕ 12-06-2025 ರಿಂದ 2025-26 ನೇ ಸಾಲಿನ ಮಳೆಗಾಲ ಮುಕ್ತಾಯವಾಗುವವರೆಗೆ ನಿರ್ಭಂದಿಸಿದೆ.

ಸದರಿ ರಸ್ತೆಯ ಪರ್ಯಾಯವಾಗಿ ಭಟ್ಕಳ ಮುಗ್ಧಮ್ ಕಾಲೋನಿ (Bhatkal Mugdum Colony) ಮುಖಾಂತರ ಪಥ ಬದಲಾವಣೆ ಮಾಡಿ ಸಂಚರಿಸಬೇಕೆಂದು  ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ(DC Lakshmipriya) ಆದ್ದೇಶಿಸಿದ್ದಾರೆ.

*ಭೂ ಕುಸಿತ ಪ್ರದೇಶದಲ್ಲಿ ವಾಹನ ನಿಲುಗಡೆಗೆ ನಿಷೇಧ*
ಉತ್ತರಕನ್ನಡ  ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಭೂ ಕುಸಿತವಾಗುವ ರಾಷ್ಟ್ರೀಯ ಹೆದ್ದಾರಿಯ ಸ್ಥಳಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ಜೂನ್ 12 ರಿಂದ ಮಳೆಗಾಲ ಮುಕ್ತಾಯವಾಗುವವರೆಗೆ ನಿರ್ಭಂಧಿಸಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ಆದೇಶಿಸಿದ್ದಾರೆ.

ಇದನ್ನು ಓದಿ : ಸಿದ್ದಾಪುರ, ಶಿವಮೊಗ್ಗ ಗಡಿಯಲ್ಲಿ ಲವ್ ದೋಖಾ ಜಾಲ. ಬಯಲಿಗೆಳೆದ ಯುವಕ ಆತ್ಮತ್ಯೆ. ಹಲವರ ಬಂಧನ.*

ಯುವತಿ ಮೊಬೈಲ್ ಎಗರಿಸಿದ ಮಂಗ. ಕಪಿಚೇಷ್ಠೆ ನೋಡಲು ಜನವೋ ಜನ.

ಮಹಿಳೆಯರಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕುಸಿತ. ಈ ವರ್ಷದಂಚಿಗೆ ಜನಸಂಖ್ಯೆ 140 ಕುಸಿತ ಸಾಧ್ಯತೆ.