ಹೊನ್ನಾವರ(Honnavar) : ಕಡಲತೀರದಲ್ಲಿ ಅಪಾಯಕ್ಕೆ ಸಿಲುಕಿದ ಮೂವರು ಯುವತಿಯರನ್ನ ರಕ್ಷಿಸಿದ ಘಟನೆ ಹೊನ್ನಾವರ (Honnavar) ತಾಲೂಕಿನ ಕಾಸರಕೋಡು (Kasarakodu) ಇಕೋ ಬೀಚ್(Echo Beach) ಬಳಿ ಸಂಭವಿಸಿದೆ.

ಸ್ವಾತಿ (24), ಚೆತಾಲಿ (21) ಮತ್ತು ಸೃಷ್ಟಿ (20) ರಕ್ಷಣೆಗೊಳಗಾದ ಯುವತಿಯರು. ಇವರೆಲ್ಲರೂ ಹುಬ್ಬಳ್ಳಿ(Hubli) ಮೂಲದವರೆಂದು ಹೇಳಲಾಗಿದೆ.

ಹುಬ್ಬಳ್ಳಿಯಿಂದ ಮೂವರು ಸ್ನೇಹಿತರು ಹೊನ್ನಾವರದ ಇಕೋ ಬೀಚ್‌ ಪ್ರವಾಸಕ್ಕೆ ಬಂದಿದ್ದರು. ನೀರಿನಲ್ಲಿ ಆಟವಾಡಲು ನೀರಿಗಿಳಿದಿದ್ದಾಗ ಅಪಾಯಕ್ಕೆ ಸಿಲುಕಿದ್ದರು. ಲೈಪ್ ಗಾರ್ಡ್(Life Guard) ಸಿಬ್ಬಂದಿಗಳಾದ ಶಶಾಂಕ ಅಂಬಿಗ, ಮಹೇಶ್ ಹರಿಕಂತ್ರ, ಯೋಗೇಶ್ ಅಂಬಿಗ ತಕ್ಷಣ ಧಾವಿಸಿ  ಮೂವರನ್ನು ರಕ್ಷಿಸಿದ್ದಾರೆ.

ಹೊನ್ನಾವರ ಪೊಲೀಸ್ ಠಾಣಾ(Honnavara police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ನೇತ್ರಾಣಿಯಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡಿದ ನಟ

ಕಾರವಾರ ಮಾರ್ಕೆಟ್, ಅಂಗಡಿಗಳ ಮೇಲೆ ದಾಳಿ

ಕನ್ಯೆ ನೋಡಲು ತೆರಳುತ್ತಿದ್ದ ವ್ಯಕ್ತಿ ಕಾರು ಪಲ್ಟಿ.

ಬಿಗ್ ಬಾಸ್, ಬಾಲಿವುಡ್ ನಟನಿಗೆ ಹೀನಾಯ ಸೋಲು