ವಿಜಯನಗರ(ಹೊಸಪೇಟೆ): ಇಲ್ಲಿನ ಎಂ.ಪಿ.ಪ್ರಕಾಶ ನಗರದ ಮನೆಯೊಂದರಲ್ಲಿ ಸಾಕಿದ್ದ ಬೆಕ್ಕು ಕೊಂದ ಆರೋಪದ ಮೇಲೆ ಮೂವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಏ.14ರಂದು ಬೆಳಗ್ಗೆ ಎಂ.ಪಿ.ಪ್ರಕಾಶ ನಗರದ ಎಂ.ಎಂ.ಹುಸೇನ್ ಎಂಬವರ ಮನೆಯ ಬಳಿ ದ್ವಿಚಕ್ರ. ವಾಹನದಲ್ಲಿ ಬಂದು ಬಲೆ ಹಾಕಿ, ಮನೆಯಲ್ಲಿ ಸಾಕಿದ್ದ 5 ವರ್ಷದ ಬೆಕ್ಕನ್ನು ಸೆರೆ ಹಿಡಿದು ನೆಲಕ್ಕೆ ಒಡೆದು ಕೊಂದು ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆಯ ಮಾಲಿಕ ಎಂ.ಎಂ.ಹುಸೇನ್ ಅವರು ನೀಡಿದ ದೂರಿನ ಆಧಾರದ ಮೇಲೆ ನಗರದ ನಿವಾಸಿಗಳಾದ ಸೀನು, ಪ್ರದೀಪ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
	
						
							
			
			
			
			
