ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಮೇ 8 ರಿಂದ 17 ರವರೆಗೆ ಉಚಿತ ಜೇನು ಸಾಕಾಣಿಕೆ ತರಬೇತಿಗೆ ಆರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಸ್ವಉದ್ಯೋಗದಲ್ಲಿ ಆಸಕ್ತಿ ಹೊಂದಿದ್ದು 18 ರಿಂದ 45 ವರ್ಷದವರಾಗಿರಬೇಕು. ಕನ್ನಡ ಓದಲು ಬರೆಯಲು ಬರಬೇಕು. ಆಸಕ್ತರು ತರಬೇತಿಗೆ ಬರುವಾಗ 4 ಪಾಸ್‌ಪೋರ್ಟ್ ಅಳತೆಯ ಫೋಟೋ, ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್‌ಗಳ ಝೆರಾಕ್ಸ್ ತರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449860007, 9538281989, 9916783825, 8880444612, 9620962004 ಕ್ಕೆ ಸಂಪರ್ಕಿಸುವAತೆ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.