ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿವಮೊಗ್ಗ(Shivamogga) : ಜಿಲ್ಲಾ ಬಿಜೆಪಿ ಕಚೇರಿಗೆ(BJP Office) ಕಾಂಗ್ರೆಸ್ ಕಾರ್ಯಕರ್ತರು(Congress Workers) ಮುತ್ತಿಗೆ ಯತ್ನ ನಡೆಸಿದ ವೇಳೆ ಭಾರೀ ಹೈಡ್ರಾಮಾ ನಡೆದು ಪ್ರತಿಭಟನೆಯ ನೂಕುನುಗ್ಗಲಿನ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಚಿನ್ನದ ಸರ ನಾಪತ್ತೆಯಾಗಿರುವ(Gold Chain Missing) ಘಟನೆ ವರದಿಯಾಗಿದೆ.
ಕೋಟೆ ಪೊಲೀಸ್ ಠಾಣೆಯ(Kote Police Station) ಎಎಸ್‌ಐ ಅಮೃತಾಬಾಯಿ ಅವರು ಪ್ರತಿಭಟನೆ ವೇಳೆ ತಮ್ಮ 60 ಗ್ರಾಂ ತೂಕದ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ. ಇತ್ತೀಚಿಗಷ್ಟೇ ಹೊಸದಾಗಿ ಖರೀದಿಸಿದ್ದ ಚಿನ್ನದ ಸರ ಕಳೆದುಕೊಂಡ ಕಾರಣ ಅಮೃತಾಬಾಯಿ ಸ್ಥಳದಲ್ಲೇ ಕಣ್ಣೀರು ಹಾಕಿದ್ದರು ಎನ್ನಲಾಗಿದೆ. ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಗಳು ಅವರನ್ನು ಸಮಾಧಾನಪಡಿಸಿದರು.
ಪ್ರತಿಭಟನೆ ವೇಳೆ ಉಂಟಾದ ನೂಕುನುಗ್ಗಲಿನ ಕಾರಣದಿಂದ ಸರ ಕಳೆದುಹೋಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಜೊತೆಗೆ, ಗದ್ದಲದ ನಡುವೆಯೇ ಕಳ್ಳರು(Thieves) ಕೈಚಳಕ ತೋರಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳದ ಸಿಸಿಟಿವಿ ಹಾಗೂ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜಕೀಯ ಪಕ್ಷದ ಪ್ರತಿಭಟನೆ(Political Party Protest) ಸಂದರ್ಭದಲ್ಲಿ ಈ ರೀತಿ ಪೊಲೀಸ್ ಅಧಿಕಾರಿಗಳ ಸರಗಳ್ಳತನವಾಗಿರುವುದು ಗಂಭೀರ ಚರ್ಚೆಗೆ(Serious Discussion) ಕಾರಣವಾಗಿದೆ.
ಇದನ್ನು ಓದಿ : ಬೆಳಕೆ ವೃದ್ದೆಯ ಚಿನ್ನದ ಸರ ಕದ್ದವ ಕುಖ್ಯಾತ ಆರೋಪಿ. ಇಬ್ಬರನ್ನ ಬಂಧಿಸಿದ ಪೊಲೀಸರು.
