ಹಳಿಯಾಳ(HALIYAL) : ತಾಲೂಕಿನ ವಿವಿಧ ಕಡೆಗಳಲ್ಲಿ ಸಾಲ ಮಾಡಿದ ಮಹಿಳಾ ಸಂಘದವರು ಪೈನಾನ್ಸ್ ನವರಿಂದ ಕಿರುಕುಳ (TORTURE) ಎದುರಿಸುತ್ತಿದ್ದಾರೆ.
ಸಾಲ (LOAN) ವಸೂಲಿಗೆ ರಾತ್ರಿ ವೇಳೆ (NIGHT TIME) ಮನೆಗೆ ಬಂದಿದ್ದ ಪೈನಾನ್ಸ್ ನವರು ಧರ್ಮದೇಟು ತಿಂದ ಘಟನೆ ಹಳಿಯಾಳದ ಬಸ್ ನಿಲ್ದಾಣ ಸಮೀಪ ನಡೆದಿದೆ.
ಹಾವೇರಿ (HAVERI) ಕಡೆಯ ಖಾಸಗಿ ಪೈನಾನ್ಸ್ ನವರು ಹಳಿಯಾಳ ತಾಲೂಕಿನ ಕೆಲ ಕಡೆಗಳಲ್ಲಿ ಮಹಿಳೆಯರ ಸಂಘಕ್ಕೆ ಸಾಲ ನೀಡಿದ್ದರು. ಪ್ರತಿ ತಿಂಗಳು ಸಾಲದ ಕಂತಿನ ವಸೂಲಿ ಮಾಡುವವರು ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಒಂಟಿ ಮಹಿಳೆಯ ಮನೆ ಬಾಗಿಲು ಬಡಿದಿದ್ದಾರೆ. ಇದರಿಂದ ರೊಚ್ಚಿಗೆದ್ದ ನಾಗರಿಕರು ತಪಾರಕಿ ಹಾಕಿದ್ದಾರೆ. ಓರ್ವನನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಇನ್ನಿಬ್ಬರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹಣ(MONEY) ವಸೂಲಿಗಾಗಿ ಗುಂಡಾಗಿರಿಯು ಮಾಡುತ್ತಿದ್ದಾರೆಂಬ ಆರೋಪವಿದೆ. ನಿನ್ನೆ ಘಟನೆಯ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ (CASE) ದಾಖಲಾಗಿದೆ.