ಕಾರವಾರ(Karwar) :  ನಾಲ್ಕನೇ ಮಹಡಿ ಮೇಲಿಂದ ವೃದ್ಧರೊಬ್ಬರೂ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶಂಕರ ಮಠ ರಸ್ತೆ (Shankar math Road) ಸಮೀಪ ಸಂಭವಿಸಿದೆ.

ಕೃಷ್ಣಾನಂದ ಶಿವರಾಮ ಪಾವಸ್ಕರ (76) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶಂಕರಮಠ ರಸ್ತೆಯ ಸಮೀಪ ಇರುವ ಮನೋಹರ್ ಅಪಾರ್ಟಮೆಂಟ್ ನಿಂದ(Manohar Apartment) ಹಾರಿ ಸಾವನ್ನಪ್ಪಿದ್ದಾರೆ.

ಮೃತರಿಗೆ ಮೂವರು ಮಕ್ಕಳಿದ್ದು ಎಲ್ಲರೂ ಪ್ರತ್ಯೇಕವಾಗಿದ್ದಾರೆ. ಕಿರಿಯ ಮಗ ವಿನಯ್ ಜೊತೆ ತಂದೆ ತಾಯಿ ಶ್ರೀಹರಿ ಹೆಸರಿನ ಮನೆಯಲ್ಲಿ ವಾಸವಾಗಿದ್ದರು. ಮನೆಯಿಂದ 50 ಮೀಟರ್ ದೂರದಲ್ಲಿರುವ ಅಪಾರ್ಟ್ಮೆಂಟ್ ಗೆ ನಡೆದು ಹೋದ ಕೃಷ್ಣಾನಂದ ಪಾವಸ್ಕರ ಲಿಫ್ಟ್ ಮೇಲೆ ತೆರಳಿ ಬಳಿಕ ಎರಡು ಚೇರ್ ಇಟ್ಟು ಅದರ ಮೇಲೆ ಹತ್ತಿ ಕೆಳಕ್ಕೆ ಜಿಗಿದಿದ್ದಾರೆ.

ಸ್ಥಳಕ್ಕೆ ಕಾರವಾರ ಪೊಲೀಸರು(Karwar Police) ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿಷಯ ಗೊತ್ತಾಗಿ ಅವರ ಇಬ್ಬರ ಮಕ್ಕಳು ಸ್ಥಳಕ್ಕೆ ಆಗಮಿಸಿದ್ದಾರೆ. ಅಪ್ಪನ ಮೃತ ದೇಹದ ಮುಂದೆ ಮಕ್ಕಳಿಬ್ಬರು ಜಗಳ ಆಡಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಎಂದು ಹಿರಿಯ ಮಗ ಸಂಜಯ ಮತ್ತು ರಾಜೇಶ್ ಪಾವಸ್ಕರ್ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕೆಂದು ಕೂಗಾಡಿದರು.

ಇನ್ನೂ ತಂದೆ ತಾಯಿ ನೋಡಿಕೊಳ್ಳುತ್ತಿದ್ದ ವಿನಯ, ನಮ್ಮ ತಂದೆಯವರು ಸಾಕಷ್ಟು ತೊಂದರೆ ನೀಡಿದ್ದಾರೆ. ಹೀಗಾಗಿ ನನ್ನ ಜೊತೆಗೆ ಇದ್ದಾರೆ. ಬೇಕಾದರೆ ತನಿಖೆ ಆಗಲಿ ಎಂದು ಹೇಳಿದ್ದಾರೆ.

ಕಾರವಾರ ನಗರ ಪೊಲೀಸರು (Karwar Town Police) ಮಕ್ಕಳ ಜಗಳದಿಂದಾಗಿ ಸಮಗ್ರವಾಗಿ ಹೇಳಿಕೆ ದಾಖಲಿಸಿಕೊಂಡು ಮೃತದೇಹವನ್ನ ಸ್ಥಳದಿಂದ ಆಸ್ಪತ್ರೆಗೆ ಒಯ್ದಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ದಾರಿ ತಪ್ಪಿಸಿದ ಗೂಗಲ್ ಮ್ಯಾಪ್. ರಾತ್ರಿ ಕಾಡಿನಲ್ಲಿ ಕುಟುಂಬ.

ಉಡುಪಿಯಲ್ಲಿ ಹೊನ್ನಾವರದ ವ್ಯಕ್ತಿಯ ಕೊಲೆ. ಸ್ಥಳಕ್ಕೆ ಎಸ್ಪಿ ಭೇಟಿ

ಡಿ.ಉಮಾಪತಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ

ಕಾರವಾರದಲ್ಲಿ ನಿಲ್ಲಿಸಿಟ್ಟ ಕಾರಿಗೆ ಆಕಸ್ಮಿಕ ಬೆಂಕಿ.