ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವಾರು ಜನರಿಂದ ಹಣ ಪಡೆದು ವಂಚಿಸಿದ(Cheating) ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಸಾಕಷ್ಟು ಜನರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.

ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ಬಿಜು ದಾಮೋದರನ್ ಎಂಬುವವರು ದೂರು‌ ದಾಖಲಿಸಿದ್ದಾರೆ. ಹೊನ್ನಾವರ ತಾಲೂಕಿನ ಹೇರಂಗಡಿಯ ಜಾಪರ್ ಸಾದಿಕ್ ಮೋಕ್ತೆಸರ್, ನೌಶಾದ್ ಕ್ವಾಜಾ ಹಾಗೂ ಹೈದ್ರಾಬಾದ್ ನ ಸುಜಾತ ಜಮ್ಮಿ ಕುಂಟ ಎಂಬುವವರು ಸೇರಿ ವಂಚನೆ ಮಾಡಿದ್ದಾರೆ.

ಜಾಲತಾಣದ ಮೂಲಕ  ಕುವೈತ್ ದೇಶದ ರಕ್ಷಣಾ ಇಲಾಖೆ(Kuwait Defence Department) ಆಸ್ಪತ್ರೆಯಲ್ಲಿ ಉದ್ಯೋಗವಿದೆ ಎಂದು ವೆಬ್ಸೈಟ್ ಮೂಲಕ ಜಾಹೀರಾತು ನೀಡುತ್ತಾರೆ.  ಕುವೈತ್ ನಲ್ಲಿ‌ ಸಾಕಷ್ಟು ಕೆಲಸವಿದೆ. ಸ್ವಲ್ಪ ಸಮಯ ಕೆಲಸ ಮಾಡಿ ನಿಮ್ಮ ದೇಶಕ್ಕೆ ಹೋಗಬಹುದು. ಕಾಗದ ಪತ್ರಗಳನ್ನು ನಾವು ಮಾಡಿಸಿ ಕೊಡುತ್ತೇವೆ ಎಂದು ನಂಬಿಸಿ  ಜಾಫರ್ ಸಾದಿಕ್ ಮುಕ್ತೆಸರ್ , ನೌಶಾದ್ ಹಾಗೂ ಸುಜಾತ ಅವರು ಅಕೌಂಟ್ ಗೆ ಸುಮಾರು 52,01,185 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಕೇರಳ, ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯ ದೇಶಗಳ ಜನರು ಮೋಸ ಹೋಗಿದ್ದಾರೆ ಎನ್ನಲಾಗಿದೆ.

ಇದೀಗ ಕೇರಳ ರಾಜ್ಯದ(Keral State) ಹಲವು ಜನರು ಕುವೈತ್ ಉದ್ಯೋಗ ನಂಬಿಕೊಂಡು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಆರೋಪಿತ ಕುವೈತ್ ಬಿಟ್ಟು ಕರ್ನಾಟಕ ಸುತ್ತಮುತ್ತ ಓಡಾಡಿಕೊಂಡಿದ್ದು ಆತನನ್ನ ಬಂಧಿಸಬೇಕೆಂದು ಹಣ ಕಳೆದುಕೊಂಡವರು ಹಾಗೂ ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ಮಂಗಳೂರು ಘಟಕದ ಅಧ್ಯಕ್ಷ ಸಿದ್ದಿಕ್ ತಲ್ಪಾಡಿ ಹೇಳಿದ್ದಾರೆ. ಇಲ್ಲದಿದ್ದಲ್ಲಿ ಇನ್ನಷ್ಟು ಜನರಿಗೆ ಮೋಸ ಮಾಡುವ ಸಾಧ್ಯತೆ ಇದೆ.

ಹೀಗಾಗಿ ಪೊಲೀಸರು ಮೋಸ ಮಾಡಿದವರನ್ನ ಬಂಧಿಸುವ ಮೂಲಕ ಮುಂದೆ ಅಮಾಯಕರು ಮೋಸ ಹೋಗುವುದನ್ನು ತಪ್ಪಿಸಬೇಕೆಂದು ಸಿದ್ದಿಕ್ ತಲ್ಪಾಡಿ ಒತ್ತಾಯಿಸಿದ್ದಾರೆ. ಜಾಪರ್ ಸಾದಿಕ್ ಈಗ ಹತ್ತಿರದಲ್ಲಿಯೇ ಇದ್ದು ಕುವೈತ್ ಅಥವಾ ಕೆನಡಾ ದೇಶದ ಪೋನ್ ನಂಬರ್ ಉಪಯೋಗಿಸಿಕೊಂಡು ಅಮಾಯಕರನ್ನ ವಂಚಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಸಹ ಇಂಥ ಮೋಸಗಾರರಿಂದ ಕರೆ ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಜೊತೆಗೆ ಜಾಗೃತೆ ಇರಬೇಕೆಂದು ಸಿದ್ದಿಕ್ ತಲ್ಪಾಡಿ ಹೇಳಿದ್ದಾರೆ.

ಇದನ್ನು ಓದಿ : ದಾಂಡೇಲಿ ರಸ್ತೆಯಲ್ಲಿ ಭಯ ಹುಟ್ಟಿಸುವ ಚಿರತೆಗಳು

ಬೈಕ್ ರೈಡ್ ಮಾಡಿ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದ ಎಸ್ಪಿ