ಕಾರವಾರ(KARWAR) : ಗಣೇಶನ ಹಬ್ಬ(GANESH FESTIVAL) ಆಚರಿಸುವ ಸಂಬಂಧ ಮಾತಿಗೆ ಮಾತು ಬೆಳೆದು ವ್ಯಕ್ತಿಯೊರ್ವನನ್ನ ಕೊಲೆ(MURDER) ಮಾಡಿದ ಘಟನೆ ಕಾರವಾರ ನಗರದ ಸಾಯಿಕಟ್ಟಾ ಬಳಿ ಸಂಭವಿಸಿದೆ.
ಸಂದೇಶ ಪ್ರಭಾಕರ ಬೋರ್ಕರ್(31) ಮೃತ ದುರ್ದೈವಿ. ಈತ ಶಿರಸಿಯ ಚೌಡೇಶ್ವರಿ ನಗರದ ನಿವಾಸಿಯಾಗಿದ್ದಾನೆ. ಇಂದು ಗಣೇಶ ಹಬ್ಬವಾಗಿದ್ದರಿಂದ ಸಾಯಿಕಟ್ಟಾದಲ್ಲಿರುವ ಮೂಲ ಮನೆಯಲ್ಲಿ ಬೋರ್ಕರ್ ಕುಟುಂಬದವರೆಲ್ಲರೂ ಸೇರಿದ್ದರು. ಕಳೆದ ವರ್ಷದ ಹಬ್ಬದ ಖರ್ಚಿನ ವಿಚಾರದಲ್ಲಿ ಮನೆಯಲ್ಲಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಆಗ ಚಾಕುವಿನಿಂದ ಪ್ರಭಾಕರ್ ಅವರ ಸಹೋದರಿಯ ಮಕ್ಕಳು ಸಂದೇಶ ಮತ್ತು ಇನ್ನೊರ್ವನಿಗೆ ಇರಿದಿದ್ದಾರೆ. ಗಾಯಗೊಂಡ ಆತನನ್ನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದು, ಇನ್ನೊರ್ವನಿಗೆ ಚಿಕಿತ್ಸೆ ನೀಡಲಾಗಿದೆ.
ಕಾರವಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ (KARWAR TOWN STATION) ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗಿದೆ.
ಇದನ್ನು ಓದಿ : ಕೊಂಕಣ ಮಾರ್ಗದಲ್ಲಿ ತಪ್ಪಿದ ದುರಂತ