ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ರಾಷ್ಟ್ರೀಯ ಹೆದ್ದಾರಿ(National Highway) 66ರಲ್ಲಿರುವ ತಾಲೂಕಿನ ಹಿರೇಗುತ್ತಿಯಲ್ಲಿರುವ(Hiregutti) ತಾತ್ಕಾಲಿಕ ಚೆಕ್‌ಪೋಸ್ಟ್‌(Checkpost) ವಾಹನ ಹರಿದು ಜಖಂ ಆದ ಘಟನೆ ನಡೆದಿದೆ.

ಸರಕು ತುಂಬಿಕೊಂಡು ಬಂದ ಲಾರಿಯೊಂದು ನಿಯಂತ್ರಣ ತಪ್ಪಿ  ಪೊಲೀಸ್ ಚೆಕ್‌ಪೋಸ್ಟ್ ಗೆ(Checkpost) ಢಿಕ್ಕಿ ಹೊಡೆದಿದೆ. ಆದರೆ ಆ ಸಂದರ್ಭದಲ್ಲಿ  ಯಾರೂ ಇಲ್ಲದ ಕಾರಣ ಬಾರೀ ಅಪಾಯ ತಪ್ಪಿದೆ. ಘಟನೆಯಿಂದ ಚೆಕ್ ಪೋಸ್ಟ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಘಟನೆಯಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು,  ಐಆರ್‌ಬಿ(IRB) ಕಂಪನಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚತುಷ್ಪಥ ರಸ್ತೆ ಕಾಮಗಾರಿ ವಿಳಂಬ ಹಾಗೂ  ಅಸಮರ್ಪಕ ನಿರ್ವಹಣೆಗೆ ಕೆಂಡ ಕಾರಿದ್ದಾರೆ.

ರಸ್ತೆ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚೆಕ್‌ಪೋಸ್ಟ್ ಈಗ ಸಂಪೂರ್ಣ ಧ್ವಂಸಗೊಂಡಿದ್ದು, ಪೊಲೀಸ್ ಇಲಾಖೆ(Police Department) ಮುಂದೇನು‌ ಮಾಡಲಿದೆ ಎಂಬುದು ಪ್ರಶ್ನೆಯಾಗಿದೆ.

ಇದನ್ನು ಓದಿ : ಮುಂದಿನ ಸಿಎಂ ಸತೀಶ ಜಾರಕಿಹೊಳಿ. ನವೆಂಬರ್ ಕ್ರಾಂತಿ ಮೂನ್ಸೂಚನೆ ನೀಡಿದ ಸಿಎಂ ಪುತ್ರ.