ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಜೋಕಾಲಿ ಆಡುವಾಗ ಕುತ್ತಿಗೆ ಚುಡಿದಾರದ ವೆಲ್ ಬಿಗಿದು ಬಾಲಕಿಯೋರ್ವಳು ಮೃತಪಟ್ಟ ಘಟನೆ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಿನ್ನೆ ನಡೆದಿದೆ.

12 ವರ್ಷದ ಪ್ರಣಿತಾ ಜಗನ್ನಾಥ ನಾಯ್ಕ ಮೃತ ಬಾಲಕಿ. ನಿನ್ಬೆ  ಶಾಲೆಗೆ ರಜೆ ಇದ್ದುದರಿಂದ ಬಾಲಕಿ  ಮನೆಯಲ್ಲಿ ಜೋಕಾಲಿ ಆಟ ಆಡುತ್ತಿದ್ದಳು ಎನ್ನಲಾಗಿದೆ. ಸಂದರ್ಭದಲ್ಲಿ ಮನೆಯಲ್ಲಿ ದೊಡ್ಡವರು ಯಾರೂ ಇರಲಿಲ್ಲ. ಆಟವಾಡುತ್ತಿದ್ದಾಗ ಜೋಕಾಲಿಗೆ ಕಟ್ಟಿದ ಚುಡಿದಾರದ ವೇಲ್ ಬಾಲಕಿಯ ಕುತ್ತಿಗೆಗೆ ಬಿಗಿದು ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ತಕ್ಷಣ ಸ್ಥಳಿಯ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಲಂಚ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಜಿಲ್ಲಾ ಸರ್ಜನ್   ಡಾ. ಶಿವಾನಂದ ಕುಡ್ತಲಕರ್ ಅಮಾನತ್ತು

ವ್ಯಾಪಕ ಮಳೆ ಹಿನ್ನಲೆ. ಇಂದು ಕರಾವಳಿಯ ಶಾಲೆಗಳಿಗೆ ರಜೆ ಘೋಷಣೆ.

ಭಟ್ಕಳದಲ್ಲಿ ಜುಲೈ 18ರಿಂದ  20 ರವರೆಗೆ  ಹಲಸು ಮತ್ತು ಹಣ್ಣಿನ ಮೇಳ.