ಜೋಯಿಡಾ : ಜಿಲ್ಲೆಯ ಅತೀ ಎತ್ತರದ ಸುಪಾ (SUPA DAM) ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರುತ್ತಿದೆ. ಹೀಗಾಗಿ ಜಲಾಶಯದ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರ ಬಿಡಲಾಗಿದೆ.
ಕಾಳಿ ನದಿಯ ಮೊದಲ ಅಣೆಕಟ್ಟು ಇದಾಗಿದ್ದು, ಒಟ್ಟು 564 ಮೀಟರ್ ಎತ್ತರವಿದೆ. ಇಂದು ನೀರಿನ ಮಟ್ಟ 559.82 ಮೀಟರ್ ತುಂಬಿದ್ದು ಮಳೆ ನಿರಂತರವಾಗಿದ್ದಲ್ಲಿ ಆಣೆಕಟ್ಟಿಗೆ ಇನ್ನಷ್ಟು ನೀರು ತುಂಬುವ ಸಾಧ್ಯತೆ ಇದೆ. ಈಗಾಗಲೇ ಜಲಾಶಯಕ್ಕೆ 21308 ಕ್ಯೂಸೆಕ್ ನೀರಿನ ಒಳಹರಿವು ಇದೆ. ಹೀಗಾಗಿ ಮೂರು ಕ್ರಸ್ಟ್ ಗೇಟ್ ಗಳ ಮೂಲಕ ಜಲಾಶಯದಿಂದ 15293 ಕ್ಯೂಸೆಕ್ ನೀರು ಹೊರಬಿಡಲಾಗಿದೆ.
ಕಳೆದ ಕೆಲ ದಿನಗಳಿಂದ ಕಾಳಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಜಲಾಶಯಕ್ಕೆ ನೀರಿನ ಮಟ್ಟ ಜಾಸ್ತಿಯಾಗುತ್ತಿದೆ. ಹೀಗಾಗಿ ಕೆಪಿಸಿ ಇಲಾಖೆಯಿಂದ ನದಿ ತೀರದ ನಾಗರಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಇದನ್ನು ಓದಿ: ರಾಜು ತಾಂಡೇಲ್ ಗೆ ನುಡಿ ನಮನ