ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ(Joida) : ತಾಲ್ಲೂಕಿನ ರಾಮನಗರದಲ್ಲಿ(Ramanagar) ಗೋಮಾಂಸ ಕಳ್ಳಸಾಗಣೆದಾರರ(Beep Smugller) ವಿರುದ್ಧ ಪೊಲೀಸರು ದಿಟ್ಟ ಕಾರ್ಯಾಚರಣೆ(Operations) ನಡೆಸಿದ್ದಾರೆ. ಕರ್ನಾಟಕದಿಂದ ಗೋವಾಕ್ಕೆ(Karnataka to Goa) ಇನ್ನೋವಾ ಕಾರಿನಲ್ಲಿ(Innova Car) ಗೋಮಾಂಸ ಕಳ್ಳಸಾಗಣೆ ನಡೆಸಲಾಗುತ್ತಿದೆ ಎಂಬ ಗುಪ್ತ ಮಾಹಿತಿ ಹಿನ್ನೆಲೆಯಲ್ಲಿ ರಾಮನಗರ ಪೊಲೀಸರು(Ramanagar Police) ಅನ್ಮೋಡ್ ಚೆಕ್‌ಪೋಸ್ಟ್‌ನಲ್ಲಿ(Anmod Checkpost) ವಾಹನ ತಡೆದ ಘಟನೆ ನಡೆದಿದೆ.
ಕರ್ನಾಟಕದಿಂದ ಗೋವಾ ಕಡೆ ತೆರಳುತ್ತಿದ್ದ ವಾಹನವನ್ನು ಅನ್ಮೋಡ್‌ನಲ್ಲಿ ಪೊಲೀಸರು ತಡೆಯಲು ಪ್ರಯತ್ನಿಸಿದಾಗ ಚಾಲಕ ವಾಹನವನ್ನು ನಿಲ್ಲಿಸದೆ ನೇರವಾಗಿ ಗೋವಾ ದಾರಿಗೆ ಪರಾರಿಯಾಗಿದ್ದ. ತಕ್ಷಣವೇ ರಾಮನಗರ ಪೊಲೀಸರು(Ramanagar Police) ಈ ಕುರಿತು ಗೋವಾ ಪೊಲೀಸರಿಗೆ ಮಾಹಿತಿ ರವಾನಿಸಿದರು.
ಗೋವಾ ಪೊಲೀಸರು(Goa Police) ಧಾರಬಂಧೋಡಾ ಪ್ರದೇಶದಲ್ಲಿ ಬಲೆ ಬೀಸಿ ವಾಹನವನ್ನು ತಡೆಯಲು ಮುಂದಾದರೂ, ಪೊಲೀಸರನ್ನು ಕಂಡ ಚಾಲಕ ಮತ್ತೆ ತಿರುಗಿ ಕರ್ನಾಟಕದತ್ತ ಪರಾರಿಯಾಗುತ್ತಿದ್ದ. ಸಿನೇಮಾ ಶೈಲಿಯ ಚೇಸಿಂಗ್(Cinema Style Chasing) ಬಳಿಕ ಪೊಲೀಸರು ಇನ್ನೋವಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಚಾಲಕ ವಾಹನ ಬಿಟ್ಟು ಕಾಡಿನತ್ತ ಪರಾರಿಯಾಗಿದ್ದಾನೆ. ಪರಾರಿಯಾದವನಿಗಾಗಿಪೊಲೀಸರ ಹುಡುಕಾಟ ಕಾರ್ಯ ಮುಂದುವರಿದಿದೆ.
ವಾಹನದಲ್ಲಿ ಲಕ್ಷಾಂತರ ರೂ. ಮೌಲ್ಯದ ಗೋಮಾಂಸ ಪತ್ತೆಯಾಗಿದ್ದು, ಇದನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಘಟನೆಯ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ(Ramanagar Police Station) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನು ಓದಿ : ಹೊನ್ನಾವರದಲ್ಲಿ ನಿಂತಿದ್ದ ಹಿಟಾಚಿ ಯಂತ್ರಕ್ಕೆ ಆಕಸ್ಮಿಕ ಬೆಂಕಿ
ಸಿಎಂ ಅವರೇ ಆಸ್ಪತ್ರೆ ಉದ್ಘಾಟಿಸೋ ಮುನ್ನ ಎಚ್ಚರ : ರೂಪಾಲಿ ನಾಯ್ಕ ಆಕ್ರೋಶ.
ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ. ನೌಕಾ ಸಿಬ್ಬಂದಿಗಳಿಂದ ಆಕರ್ಷಕ ಬೀಟಿಂಗ್ ರಿಟ್ರೀಟ್.
