ಉಡುಪಿ(UDUPI) : ಮಲ್ಪೆ ಮೀನುಗಾರಿಕೆಯ ಬೋಟಿನಲ್ಲಿ ಅಡುಗೆ ಕೆಲಸ ಮಾಡುತ್ತಿರುವ ವೇಳೆ ಒಲೆಗೆ ಇಟ್ಟಿದ್ದ ಎಣ್ಣೆಯ ಬಾಣಲೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮೀನುಗಾರ ಸಾವನ್ನಪ್ಪಿದ ಘಟನೆ ವರದಿಯಾಗಿದೆ

ಅಂಕೋಲಾ(ANKOLA)ತಾಲೂಕಿನ ಬೆಳಂಬರ್  ಗ್ರಾಮದ ನವೀನ್‌ ಗೋವಿಂದ (23) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನವೀನ್ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದರು. ಅವರು ಶೇಷಾದ್ರಿ ಬೋಟಿನಲ್ಲಿ ಅಡುಗೆ ಮಾಡುತ್ತಿರುವ ವೇಳೆ ಬೋಟು ಅಬ್ಬರದ ಅಲೆಗೆ ಅಲುಗಾಡಿದ್ದು, ಈ ವೇಳೆ ನವೀನ್‌ ಗೋವಿಂದ ಅವರು ಗ್ಯಾಸ್‌ ಒಲೆಯ ಮೇಲೆ ಇಟ್ಟಿದ್ದ ಎಣ್ಣೆಯ ಬಾಣಲಿಗೆ ಬಿದ್ದಿದ್ದರು. ಪರಿಣಾಮ ಅವರ ಮುಖ ಹಾಗೂ ಬಲಗೈ ಸುಟ್ಟು ಹೋಗಿತ್ತು. ಅವರನ್ನು ಮಣಿಪಾಲದ ಆಸ್ಪತ್ರೆಗೆ(MANIPAL HOSPITAL) ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು  ರಾತ್ರಿ ಮೃತಪಟ್ಟಿದ್ದಾರೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ(MALPE POLICE STATION) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಗಾಂಜಾ ಸೇವನೆ. ಮೂವರ ಬಂಧನ

ಹೆದ್ದಾರಿ ಮಧ್ಯೆ ಸುಟ್ಟು ಭಸ್ಮವಾದ BMW ಕಾರು

ನದಿಗೆ ಜಿಗಿದ ಮಹಿಳೆ ಶವವಾಗಿ ಪತ್ತೆ