ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ವಂದೇ ಮಾತರಂ(Vande Mataram) ಗೀತೆಯು 150 ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಆಯೋಜಿಸಿರುವ ‘ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ -2026- ರ‍್ಯಾಲಿಗೆ ಕಾರವಾರದಲ್ಲಿ(Karwar) ಅದ್ದೂರಿ ಸ್ವಾಗತ ಕೋರಲಾಯಿತು.

ಸುಮಾರು 50 ರಷ್ಟು ಮಹಿಳಾ ಸಿಬ್ಬಂದಿ ಸೇರಿದಂತೆ 120 ಸಿಐಎಸ್ಎಫ್(CISF) ಸಿಬ್ಬಂದಿಗಳು ಭಾಗವಹಿಸಿದ್ದು, ಈ ತಂಡವು ಜ.28 ರಂದು ಗುಜರಾತ್‌ನ ಲಖ್‌ಪತ್ ಕೋಟೆಯಿಂದ(Gujarata  Lakhapat Port) ತಮ್ಮ ರ‍್ಯಾಲಿಯನ್ನು ಪ್ರಾರಂಭಿಸಿದ್ದು, ಸೋಮವಾರ ಮಡಗಾಂವ್-ಕಾಣಕೋಣ-ಮಾಜಾಳಿ ಮೂಲಕ ಕಾರವಾರ(Karwar) ಪ್ರವೇಶಿಸಿತು. ಗಡಿಭಾಗದಲ್ಲಿ  ಸಿಎಸ್ಎಸ್ಎಫ್ ಕೈಗಾದ(CISF Kaiga) ಅಧಿಕಾರಿಗಳು, ಪೊಲೀಸ್ ಇಲಾಖೆ(Police Department) ಅಧಿಕಾರಿಗಳು, ಎನ್.ಸಿ.ಸಿ ವಿದ್ಯಾರ್ಥಿಗಳು(NCC Students), ಪೊಲೀಸ್ ಬ್ಯಾಂಡ್(Police Band) ಮತ್ತು ಸ್ಥಳೀಯ ಜಾನಪದ ಕಲಾತಂಡಗಳ(Folk Artist) ಮೆರವಣಿಗೆಯ ಮೂಲಕ ಅವರನ್ನು ಸ್ವಾಗತಿಸಲಾಯಿತು.

ಸೈಕ್ಲೋಥಾನ್(Cyclothan) ತಂಡದಲ್ಲಿದ್ದ ಸಿಐಎಸ್ಎಫ್(CISF) ಸಿಬ್ಬಂದಿಗಳಿಗೆ  ಗೋಟ್ನೆಭಾಗ್ ಕ್ರಾಸ್‌ನಲ್ಲಿ ಮೀನುಗಾರ ಮಹಿಳೆಯರು(Fishewomens) ತಿಲಕವಿಟ್ಟು, ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿದರು.

ಕೋಸ್ಟಲ್ ಸೈಕ್ಲೋಥಾನ್‌ನಲ್ಲಿ ಭಾಗವಹಿಸಿದ್ದ ಸಿಐಎಸ್‌ಎಫ್ ಕಾನಸ್ಟೇಬಲ್ ರಾಹುಲ್ ಮಾತನಾಡಿ,  ಗುಜರಾತನಿಂದ ಪ್ರಾರಂಭವಾದ ನಮ್ಮ ರ‍್ಯಾಲಿಯು ಕೇರಳದ ಕೊಚ್ಚಿ(Keral Kochhi) ತನಕ ನಡೆಯಲಿದೆ. ಈ ರ‍್ಯಾಲಿಯ ಮುಖ್ಯ ಉದ್ದೇಶ ಸುರಕ್ಷಿತ ಸಮೃದ್ಧ ಭಾರತ. ಕರಾವಳಿ(Coastal) ತೀರ ಪ್ರದೇಶ ಎಲ್ಲಿಯವರೆಗೆ ಸುರಕ್ಷಿತವಾಗಿರತ್ತೋ ಅಲ್ಲಿಯವರೆಗೆ ಭಾರತ ಸಮೃದ್ಧವಾಗಿರುತ್ತದೆ. ದೇಶದ ಮೀನುಗಾರರು ಸಹಕಾರ ಮಹತ್ವದಾಗಿದ್ದು, ಪ್ರತಿ ಕ್ಷಣ ಅವರು ಸಮುದ್ರದಲ್ಲಿ ಇರುವುದರಿಂದ ಕರಾವಳಿ ತೀರ ಪ್ರದೇಶದ ಆಗುಹೋಗುಗಳ ಬಗ್ಗೆ ಅವರಿಗೆ ಮಾಹಿತಿ ಇದ್ದು, ಅವರ ಜೊತೆ ಬೆರೆತು ದೇಶದ ಭದ್ರತೆಗೆ ಅವರ ಸಹಕಾರ ಪಡೆಯಲು ಸೈಕ್ಲೋಥಾನ್(Cyclothan) ಆಯೋಜಿಸಲಾಗಿದೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್‌ಎಫ್) ದೇಶದ ಪ್ರಮುಖ ನಿರ್ಣಾಯಕ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದರು.

ಸಿಐಎಸ್ಎಫ್ ಘಟಕ ಎನ್.ಪಿ.ಸಿ. ಕೈಗಾದ ಸೀನಿಯರ್ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಬೆಂಗಳೂರಿನ ಸ್ಯಾಟಲೈಟ್ ಕೇಂದ್ರದ ಸೀನಿಯರ್ ಕಮಾಂಡೆಂಟ್ ಆರ್.ಪಿ. ಸಿಂಗ್, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ್, ಡಿವೈಎಸ್ಪಿ ಗಿರೀಶ್ ಮತ್ತಿತರರು ಭಾಗವಹಿಸಿದ್ದರು.

ಇದನ್ನು ಓದಿ : ಮತ್ತೆ ಅಧ್ಯಕ್ಷರಾದ ಶಾಸಕ ಶಿವರಾಮ ಹೆಬ್ಬಾರ್. ಉಪಾಧ್ಯಕ್ಷರಾಗಿ ಕೃಷ್ಣ.

ಗೋಕರ್ಣದಲ್ಲೊಂದು ಪುಣ್ಯದ ಸಾವು. ಶಿವನ ಪಾದ ಸೇರಿದ ರತ್ನಾಕರ.