ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ(Belagavi) : ಕುಟುಂಬವೊಂದು ಗೂಗಲ್ ಮ್ಯಾಪ್ ನೋಡಿ ಪ್ರಯಾಣಿಸುತ್ತಾ ದಿಕ್ಕು ತಪ್ಪಿ ಕಾಡಿನಲ್ಲಿಯೇ ರಾತ್ರಿ ಕಳೆದ ಘಟನೆ ನಡೆದಿದೆ.
ಬೆಳಗಾವಿ(Belagavi) ಜಿಲ್ಲೆಯ ಖಾನಾಪುರ (Khanapur) ಭೀಮಗಢ ಅರಣ್ಯ(Bheemghada Forest) ಪ್ರದೇಶದಲ್ಲಿ ಬಿಹಾರದ ಮೂಲದ(Bihar Native) ರಣಜಿತದಾಸ್ ಕುಟುಂಬ ದಾರಿ ತಪ್ಪಿದೆ. ಈ ಕುಟುಂಬದ ಮೂವರು ಗೋವಾಕ್ಕೆ ಪ್ರವಾಸ(Goa tour) ತೆರಳಿದ್ದರು. ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗ ಮದ್ಯ ಸಮೀಪದಿಂದ ತೆರಳುವಾಗ ಮ್ಯಾಪ್ ಹಿಡಿದು ಹೊರಟಿದ್ದಾರೆ. ಭೀಮಗಢ ಅರಣ್ಯದೊಳಗೆ ಎಳು ಎಂಟು ಕಿಲೋಮೀಟರ್ ದೂರ ಸಾಗುತ್ತಿರುವಾಗ ಮೊಬೈಲ್ ನೆಟವರ್ಕ್ ಸಿಗದೇ ಪರದಾಡಿದ್ದಾರೆ.
ಬಳಿಕ ನಾಲ್ಕು ಕಿಲೋ ಮೀಟರ್ ಹೊರ ಬಂದ ಬಳಿಕ ನೆಟವರ್ಕ್ ಸಿಕ್ಕಿದ್ದರಿಂದ ಸಹಾಯಕ್ಕಾಗಿ 112 ಕರೆ ಮಾಡಿದಾಗ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಪೊಲೀಸರ ಸಹಾಯದಿಂದ ಕಾಡಿನಿಂದ ಹೊರ ಬಂದಿದ್ದಾರೆ.
ಕಳೆದ ವಾರವಷ್ಟೇ ಗೂಗಲ್ ಮ್ಯಾಪ್ ನಂಬಿ ಕಾರಿನಲ್ಲಿ ಪ್ರಯಾಣಿಸಿದ ಮೂವರು ನಿರ್ಮಾಣ ಹಂತದ ಸೇತುವೆಯಿಂದ ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಸಂಭವಿಸಿತ್ತು. ಘಟನೆ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಗೂಗಲ್ ಮ್ಯಾಪ್ ನಂಬಿದ ಕುಟುಂಬ ದಾರಿ ತಪ್ಪಿದೆ.
ಇದನ್ನು ಓದಿ : ಉಡುಪಿಯಲ್ಲಿ ಹೊನ್ನಾವರ ವ್ಯಕ್ತಿ ಕೊಲೆ