ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar):  ರಾಜ್ಯದ 197 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2024ನೆ ಸಾಲಿನ ಮುಖ್ಯಮಂತ್ರಿ ಪದಕಗಳನ್ನು(CM Medal) ಪ್ರಕಟಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಇಬ್ಬರು ಪದಕಕ್ಕೆ ಭಾಜನರಾಗಿದ್ದಾರೆ. ಕಾರವಾರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಎಸ್ಐ(ASI) ಬಲಿಂದ್ರ  ಸುಕ್ರು ಗೌಡ ಮತ್ತು ಗೋಕರ್ಣ ಪಿಎಸ್ಐ ಖಾದರ್ ಭಾಷಾ ಅವರ ಹೆಸರು ಘೋಷಣೆಯಾಗಿದೆ.

ಅಂಕೋಲಾ ತಾಲೂಕಿನ(Ankola Taluku) ಶೇಡಿಕುಳಿ ಗ್ರಾಮದ ಬಲಿಂದ್ರ ಅವರು  ಪೊಲೀಸ್ ಇಲಾಖೆಯಲ್ಲಿ(Police Department) ಬಾಬು ಎಂದೇ ಪ್ರಸಿದ್ದಿ. 1996ರಲ್ಲಿ ಡಿಎಆರ್ ನಲ್ಲಿ ಕಾನಸ್ಟೇಬಲ್ ಹುದ್ದೆಗೆ ಸೇರಿದ್ದರು.  ಆರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ 2002ರಿಂದ ಇವರೆಗೂ  ಪಿಟಿಎಸ್(PTS) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಗೆ  ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಒಟ್ಟು 12 ಬ್ಯಾಚ್ ತರಬೇತಿ ನಿರತ ಪೊಲೀಸರಿಗೆ ತರಬೇತಿ ನೀಡಿದ್ದಾರೆ.

ಜನವರಿ 26, ಆಗಸ್ಟ್ 15 ಸೇರಿ ರಾಷ್ಟ್ರೀಯ  ದಿನದ ಸಂದರ್ಭದಲ್ಲಿ ಪರೇಡ್ ಗೆ ಶಾಲಾ ಕಾಲೇಜುಗಳ ಮಕ್ಕಳಿಗೆ  ಮಾರ್ಗದರ್ಶನ ನೀಡಿ ಸಜ್ಜುಗೊಳಿಸುವುದರಲ್ಲಿ ಬಾಬು ಗೌಡ ಅವರ ಶ್ರಮ ಸಾಕಷ್ಟಿದೆ.

2013ರಲ್ಲಿ ಹವಾಲ್ದಾರ್ ಆಗಿ ಪ್ರಮೋಷನ್ ಆಗಿ ಮಾರ್ಚ್ 12ರಂದು ಎಎಸ್ಐ ಆಗಿ ಪದೋನ್ನತಿ ಹೊಂದಿದ್ದಾರೆ. ಬಾಬು ಗೌಡ ಅವರಿಗೆ ಮುಖ್ಯಮಂತ್ರಿ ಪದಕ  ಲಭಿಸಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಅಭಿನಂದಿಸಿದ್ದಾರೆ. ಇಲಾಖೆಯ ಶಿಸ್ತಿನ, ಸಿಬ್ಬಂದಿಗೆ ಗೌರವ ಪ್ರಾಪ್ತರಾಗಿರುವುದಕ್ಕೆ ಇಲಾಖೆಯ  ಸಿಬ್ಬಂದಿಗಳು, ನಾಗರಿಕರು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಭಟ್ಕಳ ರಂಜಾನ್ ಮಾರುಕಟ್ಟೆಗೆ ಎಸ್ಪಿ ಎಂ ನಾರಾಯಣ್ ಭೇಟಿ

ತಾಯಿ ಹೆರಿಗೆ ಮಾಡಿದ 13 ವರ್ಷದ ಬಾಲಕ.

ನದಿಯಲ್ಲಿ ಬಿದ್ದ  ವಿದ್ಯುತ್‌ ಲೈನ್ ದುರಸ್ತಿ ಮಾಡಿದ ಹೆಸ್ಕಾಂ  ಸಿಬ್ಬಂದಿಗಳು.