ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : 13 ವರ್ಷದ ಬಾಲಕನೋರ್ವ ತನ್ನ ತಾಯಿಗೆ ಹೆರಿಗೆ ನೋವು ಆರಂಭವಾದಾಗ ಭಯಪಡದೆ ಮನೆಯಲ್ಲಿ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ ಅಪರೂಪದ ಘಟನೆ(Rare Incident) ಚೀನಾದ ಫುಜಿಯಾನ್ ಪ್ರಾಂತ್ಯದಿಂದ ವರದಿಯಾಗಿದೆ.
37 ವಾರಗಳ ಗರ್ಭಿಣಿಯಾಗಿರುವ ತಾಯಿಗೆ ನೀರು ಸೋರಿದ್ದು ತೀವ್ರ ನೋವಿನಿಂದ ಬಳಲುತ್ತಿದ್ದರು. ಮಗುವಿನ ತಲೆ ಹೊರಗೆ ಬಂದಿದೆ ಎಂದು ಬಾಲಕ ತುರ್ತು ಕೇಂದ್ರಕ್ಕೆ(Emergency Center) ಕರೆ ಮಾಡಿ, ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದಾನೆ. ಇದನ್ನು ಕೇಳಿಸಿಕೊಂಡು ತಾಯಿಯ ಯೋಗಕ್ಷೇಮದ ಬಗ್ಗೆ ಭಯಭೀತರಾದ ವೈದ್ಯರು ಕೆಲವು ಮಾರ್ಗದರ್ಶನ ನೀಡಿದರು. ಆ ಮೂಲಕ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.
ಅವರ ಮನೆಗೆ ಆಂಬ್ಯುಲೆನ್ಸ್ ಬರುವವರೆಗೂ ಫೋನ್ ಮೂಲಕವೇ ವೈದ್ಯರು ಹುಡುಗನಿಗೆ ಸೂಚನೆ ನೀಡಿದ್ದಾರೆ. ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು, ಆ ಸಮಯದಲ್ಲಿ ಅವರನ್ನು ಹೇಗೆ ಸಮಾಧಾನಪಡಿಸುವುದು ಮತ್ತು ಮಗು ಜನನಕ್ಕೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.
ವೈದ್ಯರ ಸೂಚನೆಗಳನ್ನು ಅನುಸರಿಸಿ, ಹದಿಹರೆಯದ ಹುಡುಗ ಆರೋಗ್ಯವಾಗಿರುವ ಗಂಡು ಮಗುವಿಗೆ(Baby Boy) ಜನ್ಮ ನೀಡಲು ತನ್ನ ತಾಯಿಗೆ ಸಹಾಯ ಮಾಡಿದ್ದಾನೆ. ಇನ್ನು ಹೊಕ್ಕುಳಬಳ್ಳಿಯನ್ನು ಬಿಗಿಗೊಳಿಸುವ ಸಮಯ ಬಂದಾಗ, ಹುಡುಗನಿಗೆ ಸ್ವಚ್ಛವಾದ ದಾರ ಸಿಗದಿದ್ದಾಗ. ವೈದ್ಯರು ಮಾಸ್ಕ್ ಸ್ಟ್ರಾಪ್ ಬಳಸಲು ಸಲಹೆ ನೀಡಿದ್ದು ಸೋಂಕು ಮತ್ತು ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ, ವೈದ್ಯಕೀಯ ಸಿಬಂದಿ ಮನೆಗೆ ಬಂದು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದು ಇಬ್ಬರು ಆರೋಗ್ಯವಾಗಿದ್ದರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ನದಿಯಲ್ಲಿ ಬಿದ್ದ ವಿದ್ಯುತ್ ಲೈನ್ ದುರಸ್ತಿ ಮಾಡಿದ ಹೆಸ್ಕಾಂ ಸಿಬ್ಬಂದಿಗಳು.
ಬಡವಳಿಗೆ ಪರಿಹಾರ ನೀಡಲು ನಿರ್ಲಕ್ಷ್ಯ. ರೊಚ್ಚಿಗೆದ್ದ ಆರ್ ವಿ ದೇಶಪಾಂಡೆ.