ಶಿರಸಿ(Sirsi): ತಾಲೂಕಿನ ಜಾನ್ಮನೆ ವಲಯದ(Janmane Range) ಸರಗುಪ್ಪ ಶಾಖಾ ವ್ಯಾಪ್ತಿಯ ಬೆಣಗಾಂವ್ ಗ್ರಾಮದಲ್ಲಿ ಎಂಟು ವರ್ಷದ ಗಂಡು ಚಿರತೆಯೊಂದು(Lepord) ಸಹಜವಾಗಿ ಮೃತಪಟ್ಟಿದೆ.
ಚಿರತೆ ಸಾವಿನ ಬಗ್ಗೆ ಶಿರಸಿ ಅರಣ್ಯ ಇಲಾಖೆ(Sirsi Forest Department) ದೃಡಪಡಿಸಿದೆ. ಸಹಜ ಸಾವಾಗಿ ಪತ್ತೆಯಾದ ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಹಾಗು ಜಾನ್ಮನೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಸಿ ಎನ್ ಅವರ ಸಮ್ಮುಖದಲ್ಲಿ ಪಶುವೈದ್ಯ ಡಾ ಪ್ರಶಾಂತ್ ಕೈಗೊಂಡಿದ್ದರು. ನಂತರ ಚಿರತೆಯ ಅಂತ್ಯಕ್ರಿಯೆ ನೆರವೇರಿಸಲಾಯಿತು .
ಈ ಸಂದರ್ಭದಲ್ಲಿ ಜಾನ್ಮನೆ ಉಪ ವಲಯ ಅರಣ್ಯಾದಿಕಾರಿ ಉಷಾ ರಾಜು ಕಬ್ಬೆರ್, ಸರಗುಪ್ಪ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ವಿನಯಕುಮಾರ ಶಿವಣಗಿ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನು ಓದಿ : ಕಾಲಿಗೆ ಚಪ್ಪಲಿ ಧರಿಸಲ್ಲ. ಅಣ್ಣಾ ಮಲ್ಲೈ ಶಪಥ.
ಫ್ಲೈಯಿಂಗ್ ಆಫೀಸರ್ ಸಾಯಿಶ್ರೀಗೆ ಅಸ್ನೋಟಿಯಲ್ಲಿ ಸನ್ಮಾನ
ಪಾಕಿಸ್ತಾನದಲ್ಲಿರುವ ಮನಮೋಹನ್ ಸಿಂಗ್ ಬಾಲಕರ ಶಾಲೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ. ಇಂದು ಸರ್ಕಾರಿ ರಜೆ ಘೋಷಣೆ.