ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ನಗರದ ಕೋರ್ಟ್ ರಸ್ತೆ ಎದುರು ಹಾಳಾದ ತೆಂಗಿನಮರ(Coconut Tree) ತೆರವುಗೊಳಿಸುವ ವೇಳೆ ಕೆಳಕ್ಕೆ ಬಿದ್ದು ಬಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.

ನಮನ ಬೇಕರಿ ಎದುರು ನಗರಸಭೆಗೆ (CMC) ಸೇರಿದ ತೆಂಗಿನಮರವೊಂದಿತ್ತು. ಫಲ ಇಲ್ಲದ ಬೋಳಾದ ತೆಂಗಿನಮರ ತೆಗೆಯಲು ನಗರಸಭೆ ಅಧಿಕಾರಿಗಳು ಕಾರ್ಮಿಕರಿಗೆ ತಿಳಿಸಿತ್ತು. ಇಂದು ಮರ ಕಟಿಂಗ್ ಮಾಡಲು ಕಾರ್ಮಿಕ ರಫಿಕ್ ಎಂಬುವವರು ಮೇಲಕ್ಕೆ ಏರಿದ್ದರು. ಆಗ ಮರ ಬುಡ ಸಮೇತ ಕೆಳಕ್ಕೆ ಬಿದ್ದಿದೆ. ಆದರೆ ರಸ್ತೆಗೆ ಅಡ್ಡಲಾಗಿ ಇದ್ದ ವಿದ್ಯುತ್ ‌ಎಲ್ಟಿ ಲೈನ್ಗೆ (LT Line) ಸಿಕ್ಕಿದ್ದರಿಂದ ಕಾರ್ಮಿಕ ಬಚಾವ್ ಆಗಿದ್ದಾನೆ

ಮರ ತೆರವುಗೊಳಿಸುವ ಮುನ್ನ ಹೆಸ್ಕಾಂ ಅಧಿಕಾರಿಗಳು(Hescom Officer) ವಿದ್ಯುತ್ ಲೈನ್ ಸಂಪರ್ಕ ಕಡಿತಗೊಳಿಸಿದ್ದರಿಂದ ಕಾರ್ಮಿಕ ಬಚಾವ್ ಆಗಿದ್ದಾನೆ. ಮರ ಬಿದ್ದ ರಭಸಕ್ಕೆ ಒಟ್ಟು ಮೂರು ವಿದ್ಯುತ್ ಕಂಬಗಳು ಬಿದ್ದಿದ್ದು ಲಗೇಜ್ ವಾಹನಗಳಿಗೆ ಹಾನಿಯಾಗಿವೆ.

ಒಂದು ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಿದ್ದರೇ ಬಾರಿ ಅನಾಹುತ ಆಗುವುದರ ಜೊತೆಗೆ ಜೀವ ಹಾನಿಯಾಗುತಿತ್ತು. ಈ ಹಿಂದೆ ನಗರಸಭೆ ವ್ಯಾಪ್ತಿಯ ಅಪಾಯಕಾರಿ ಮರಗಳನ್ನ ತೆರವುಗೊಳಿಸುವಂತೆ ನಾಗರಿಕರು ನಗರಸಭೆಗೆ ದೂರು ನೀಡಿದ್ದರು.  ಹೀಗಾಗಿ  ನಗರಸಭೆ ಇನ್ನಾದರೂ ಎಚ್ಚರಗೊಂಡು ಮುಂಜಾಗೃತೆ ವಹಿಸಬೇಕಾಗಿದೆ.

ಇದನ್ನು ಓದಿ : ಕಾರವಾರ ಜಿಲ್ಲಾಸ್ಪತ್ರೆಯ ಸರ್ಜನ್ ಡಾ ಶಿವಾನಂದ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ.

ಮುರ್ಡೇಶ್ವರದಲ್ಲಿ ದೋಣಿ ದುರಂತ. ಓರ್ವ ಸಾವು, ಇನ್ನೋರ್ವ ನಾಪತ್ತೆ