ಕಾರವಾರ : ಭಾರಿ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿರುವುದರಿಂದ ಮಕ್ಕಳಿಗೆ ಶಾಲೆಗೆ ತೆರಳಲು ಅನಾನುಕೂಲವಾಗುವುದರ ಜೊತೆಗೆ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಕುಮಟಾ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 9ರಂದು ರಜೆ (HOLIDAY) ಮುಂದುವರಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಹಾಗೂ ತಹಶೀಲ್ದಾರ (TAHASILDAR) ಅವರ ವರದಿಯಂತೆ ಜಿಲ್ಲೆಯ ಹೊನ್ನಾವರ (HONNAVAR), ಕುಮಟಾ (KUMTA) ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34(ಎಮ್) ರಡಿ ಜಿಲ್ಲಾಧಿಕಾರಿಗಳು ಕುಮಟಾ, ಹೊನ್ನಾವರ, ತಾಲ್ಲೂಕಿನಾದ್ಯಂತ (12ನೇಯ ತರಗತಿಯ ವರೆಗೂ) ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 09 ರಂದು ರಜೆ ಘೋಷಿಸಿ (ANNOUNCED) ಆದೇಶ ಮಾಡಿದ್ದಾರೆ
ಈ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಇನ್ನುಳಿದ ತಾಲೂಕುಗಳಿಗೆ ಪರಿಸ್ಥಿತಿ ಅರಿತು ರಾತ್ರಿ ಮಳೆ (NIGHT RAIN) ಹೆಚ್ಚಾದಲ್ಲಿ ಬೆಳಿಗ್ಗೆ (MORNING) ನಿರ್ಧಾರ ಮಾಡುವ ಸಾಧ್ಯತೆ ಇದೆ