ಕುಮಟಾ(Kumta) : ಜಮೀನು ಕಳೆದುಕೊಂಡಿದ್ದ ವ್ಯಕ್ತಿಗೆ ಪರಿಹಾರ (Componation) ನೀಡಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ (seaz) ಮಾಡಿದ ಘಟನೆ ಕುಮಟಾದಲ್ಲಿ ನಡೆದಿದೆ.

ಕುಮಟಾ ಜೆಎಂಎಫ್‌ಸಿ ನ್ಯಾಯಾಲಯದ(Kumta JMFC Court) ಆದೇಶದ (order) ಮೇಲೆ ಜಪ್ತಿ ಮಾಡಲಾಗಿದೆ. ಉದಯ ಬಾಳಗಿ ಎಂಬುವವರು ಗುಂಡಬಾಳ ಗ್ರಾಮದಲ್ಲಿ(Gundabala village) ಕುಡಿಯುವ ನೀರಿನ ಯೋಜನೆಗೆ ಜಾಗ ನೀಡಿದ್ದರು. ನಾಲ್ಕು ಗುಂಟೆ ಜಮೀನಿಗೆ ಸೂಕ್ತ ಪರಿಹಾರ ನೀಡದೆ ಇರುವುದರಿಂದ ಪ್ರಕರಣ ದಾಖಲಿಸಿದ್ದರು.

ನ್ಯಾಯಾಲಯವು ಪರಿಹಾರ ಹಣ 10,58,295ರೂ. ನೀಡದೆ ಇರುವುದರಿಂದ ಜಪ್ತಿಗೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಕಚೇರಿಯ ಕಂಪ್ಯೂಟರ್, ಝೇರಾಕ್ಷ ಯಂತ್ರ ಸೇರಿ ಪೀಠೋಪಕರಣ ಜಪ್ತು ಮಾಡಲಾಗಿದೆ.

ಇದನ್ನು ಓದಿ : ಮೂವರು ಮಕ್ಕಳನ್ನ ನದಿಗೆ ದೂಡಿದ ವ್ಯಕ್ತಿ

ಹೆಜ್ಜೇನು ದಾಳಿ. ನಾಲ್ವರಿಗೆ ಗಾಯ

ನವೆಂಬರ್ 20ರಂದು ಮದ್ಯದಂಗಡಿ ಬಂದ್

ಮನೆಯಿಂದ ಕಣ್ಮರೆಯಾಗಿದ್ದ ಬಾಲಕ ಪತ್ತೆ