ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಜೋಯಿಡಾ(Joida) : ರಸ್ತೆಯ ಪಕ್ಕದಲ್ಲಿ ನಿಂತಿದ್ದ ವೇಳೆ ಹಾವು ಕಡಿದು(Snake Bite) ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಜೋಯಿಡಾದ ಜಗಲಪೇಟ(Joida Jagalapeta) ಸಮೀಪ ನಡೆದಿದೆ.

ಗೋವಾ ಕಾಂಗ್ರೆಸ್ ಮುಖಂಡ(Goa Congress Leader) ಕೇತನ ಭಾಟಿಕರ(41) ಮೃತ ದುರ್ದೈವಿ.  ಗೋವಾದ  ಪೊಂಡ(Goa Ponda) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಕರೆಸಿಕೊಂಡಿದ್ದ ಕೇತನ  ಚುನಾವಣೆಯಲ್ಲಿ  ಸ್ಪರ್ಧಿಸುವ ಹುಮ್ಮಸಿನಲ್ಲಿದ್ದರು. ಅವರು ಗೆಲ್ಲುವ ಅಭ್ಯರ್ಥಿ ಎಂದು ಹೇಳಲಾಗಿತ್ತು. ಚುನಾವಣೆ ಮುಂದೂಡಿದ ಕಾರಣ  ಅವರು ಕರ್ನಾಟಕದ  ದಾಂಡೇಲಿಗೆ(Karnataka Dandeli) ಬಂದಿದ್ದರು ಎನ್ನಲಾಗಿದೆ.

ದಾಂಡೇಲಿಯಿಂದ(Dandeli) ರಾತ್ರಿ ವೇಳೆ ಗೋವಾ ಹೋಗುವಾಗ ಬಾರೀ ಮಳೆ ಎದುರಾಗಿತ್ತು. ಜಗಲಬೇಟ ಅನಮೋಡ(Jagakabeta Anmod) ನಡುವೆ ಅವರು ಕಾರಿನಿಂದ ಕೆಳಗೆ ಇಳಿದಿದ್ದರು.  ಆ ವೇಳೆ ಕಾಲಿಗೆ ಹಾವು ಕಡಿದಿದೆ ಎಂದು ತಿಳಿದು ಬಂದಿದೆ.  ತಕ್ಷಣ ಅವರನ್ನು ಪಣಜಿಯ ಆಸ್ಪತ್ರೆಗೆ(Panaji Hospital) ದಾಖಲಿಸಲಾಗಿತ್ತಾದರೂ  ಬದುಕುಳಿಯಲಿಲ್ಲ. ಜೋಯಿಡಾದ  ರಾಮನಗರ ಪೊಲೀಸ್‌ ಠಾಣಾ(Ramanagar Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.