ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar): ತಾಲೂಕಿನ ಸಾಲ್ಕೋಡ, ಕೊಂಡಾಕುಳಿಯಲ್ಲಿ ಕಟುಕರ ಕೃತ್ಯಕ್ಕೆ ಗರ್ಭದ ಗೋವು ಕಳೆದುಕೊಂಡ ಕುಟುಂಬಕ್ಕೆ ಪರಮಾತ್ಮನ ರೂಪದಲ್ಲಿ ವ್ಯಕ್ತಿಯೋರ್ವರು ಆಕಳು(Cow) ಕರುವನ್ನ ಕರುಣಿಸಿದ್ದಾರೆ.
ಯಂಗ್ ಒನ್ ಇಂಡಿಯಾ(Young One India) ಸಂಸ್ಥಾಪಕ, ಉದ್ಯಮಿ ಮಾಸ್ತಪ್ಪ ನಾಯ್ಕ ಅವರು ಗರ್ಭದ ಆಕಳನ್ನು ಕಳೆದುಕೊಂಡ ಕೃಷ್ಣ ಆಚಾರಿ ಕುಟುಂಬಕ್ಕೆ ಆಕಳು ಮತ್ತು ಕರುವನ್ನು ದಾನವಾಗಿ ನೀಡಿದ್ದಾರೆ. ಒಂದುವರೆ ತಿಂಗಳ ಹಿಂದೆ ಮೇಯಲು ಹೋದ ಗರ್ಭದ ಆಕಳನ್ನ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಘಟನೆ ತಿಳಿದು ಅಘಾತಕ್ಕೊಳಗಾದ ಕುಟುಂಬಕ್ಕೆ ಮಾಸ್ತಪ್ಪ ಅವರು ಸಹಾಯದ ಹಸ್ತ ಚಾಚಿದ್ದಾರೆ.
ಆಕಳು ಮತ್ತು ಕರು ಪಡೆದ ಕುಟುಂಬಸ್ಥರು ಗೋ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಸ್ತಪ್ಪ ನಾಯ್ಕ(Mastappa Naik), ಕೇವಲ ಗೋ ಹತ್ಯೆ ಘಟನೆಯನ್ನ ಖಂಡಿಸಿದರೆ ಸಾಲದು, ಕೃಷ್ಣ ಆಚಾರಿ ಮನೆಯ ಗೋವಿನ ಹತ್ಯೆ ಮತ್ತು ಅವರ ಮನೆಯ ಪರಿಸ್ಥಿತಿಯನ್ನ ನನ್ನ ಬಳಗದವರು ತಿಳಿಸಿದರು. ಕುಟುಂಬಕ್ಕೆ ಏನಾದರು ಸಹಾಯ ಮಾಡಬೇಕು, ಅವರ ನೋವಿಗೆ ಸ್ಪಂದಿಸಬೇಕು ಎಂದು ಆಕಳು ಮತ್ತು ಕರುವನ್ನು ಅವರಿಗೆ ದಾನವಾಗಿ ನೀಡಿದ್ದೇನೆ. ಅದನ್ನು ಅವರು ಚೆನ್ನಾಗಿ ನೋಡಿಕೊಳ್ಳಲಿ, ಅವರ ಮನೆಯಲ್ಲಿ ಗೋವಿನ(Cattles) ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂದು ಹಾರೈಸಿದರು.
ರಾಜ್ಯ(State) ಮತ್ತು ದೇಶದಲ್ಲಿ(Nation) ಗೋವಿನ ಬಗ್ಗೆ ಕಟ್ಟುನಿಟ್ಟಿನ ಕಾನೂನು ಬರಬೇಕು. ಅದರ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ನಾನು ಇವರಿಗೆ ಏನಾದರು ಕೊಡಬೇಕು ಎನ್ನುವ ಮನಸ್ಸಿತ್ತು, ಅದಕ್ಕೆ ಇವತ್ತು ಬಂದಿದ್ದೇನೆ ಎಂದರು.
ಗರ್ಭದ ಗೋವಿನ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಒಂದು ವೇಳೆ ಅವರು ಕಾನೂನಿನ ಅಡಿಯಲ್ಲಿ ತಪ್ಪಿಸಿಕೊಂಡರೆ, ಕರ್ಮ ಅವರನ್ನು ಖಂಡಿತ ಬಿಡುವುದಿಲ್ಲ ಎಂದು ಉದ್ಯಮಿ ಮಾಸ್ತಪ್ಪ ನಾಯ್ಕ ಹೇಳಿದರು.
ಕುಟುಂಬದ ಗೀತಾ ಆಚಾರಿ ಈ ವೇಳೆ ಮಾತನಾಡಿ, ಆಕಳು ಇಲ್ಲದೆ ಒಂದೂವರೆ ತಿಂಗಳು ಕಳೆಯಿತು. ಯಾರು ನಮ್ಮ ಮನೆಗೆ ಬಂದು ಸಹಾಯ ಮಾಡಿರಲಿಲ್ಲ. ಮಾಸ್ತಪ್ಪ ನಾಯ್ಕರವರು ಸ್ಥಳೀಯರಿಂದ ಮಾಹಿತಿ ಪಡೆದು ಆಕಳು ಮತ್ತು ಕರು ನೀಡಿದ್ದಕ್ಕೆ ತುಂಬಾ ಖುಷಿಯಾಗಿದೆ. ಖಾಲಿಯಾದ ನಮ್ಮ ಮನೆಯ ಕೊಟ್ಟಿಗೆ ತುಂಬಿಸಿದ್ದಾರೆ. ಮುಂದೆ ಯಾವ ಆಕಳಿಗೂ ಹೀಗೆ ಆಗಬಾರದು, ಇವರು ಕೊಟ್ಟಿರುವ ಆಕಳನ್ನು ಹೊರಗೆ ಬಿಡಲು ಹೆದರಿಕೆ ಆಗುತ್ತಿದೆ. ಮಾಸ್ತಪ್ಪ ನಾಯ್ಕರಿಗೆ ದೇವರು ಆರೋಗ್ಯ, ಆಯುಷ್ಯ ಕೊಡಲಿ, ಮುಂದೆ ಬಡವರಿಗೆ ಸೇವೆ ಮಾಡುವ ಅವಕಾಶ ಸಿಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಸಾಲ್ಕೋಡು ಗ್ರಾಮದ ನಾಗರಿಕರು, ಮಾಸ್ತಪ್ಪ ನಾಯ್ಕ ಅವರ ಅಭಿಮಾನಿಗಳು ಹಾಜರಿದ್ದರು.
ಇದನ್ನು ಓದಿ : ವಿಜೃಂಭಣೆಯಿಂದ ಜರುಗಿದ ಶ್ರೀ ನಾಗನಾಥ ದೇವರ ಜಾತ್ರೆ. ದರ್ಶನ ಪಡೆದು ಹರಕೆ ತೀರಿಸಿದ ಶಾಸಕ.
ಹೃದಯಘಾತದಿಂದ ಕುಸಿದು ಬಿದ್ದು ಶಾಲಾ ವಿದ್ಯಾರ್ಥಿನಿ ದುರ್ಮರಣ.
ಖೈದಿಗಳಿಗೂ ಗಂಗಾಜಲ ಸ್ನಾನ. ಯುಪಿ ಸಿಎಂ ಯೋಗಿ ಸರ್ಕಾರದಿಂದ ವ್ಯವಸ್ಧ
.