ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ನಗರದ ಅಂಬೇವಾಡಿಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ(Honeybee Attack) ಮಾಡಿದೆ.
ಘಟನೆಯಲ್ಲಿ ಏಳು ಜನ ಕಾರ್ಮಿಕರು (Labours) ಗಾಯಗೊಂಡಿದ್ದಾರೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಅಂಬೇವಾಡಿ(Ambewadi) ಕೈಗಾರಿಕಾ ಪ್ರದೇಶದಲ್ಲಿರುವ ಬಿಹಾತಿ ಗೋಡಾನ್ ಕಟ್ಟಡದ ಹೊರಬದಿಯಲ್ಲಿ 30ಕ್ಕೂ ಅಧಿಕ ಜೇನುಗೂಡು ಕಟ್ಟಿದೆ. ಸುತ್ತಮುತ್ತ ಇರುವ ವಿವಿಧ ಸಣ್ಣ ಸಣ್ಣ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಪ್ರತಿದಿನವೂ ಭಯದಿಂದಲೇ ಕೆಲಸ ನಿರ್ವಹಿಸಬೇಕಾದ ಸ್ಥಿತಿಯಿದೆ.
ಗಾಯಗೊಂಡವರ ಪೈಕಿ ನಿರ್ಮಲ ನಗರದ ಅನಿಲ್ ಮತ್ತು ಸಂತೋಷ ಹಾಗೂ ಗಾಂಧಿನಗರದ ಕಾರ್ತಿಕ್ ಮತ್ತು ಅಂಕಿತ್ ಇವರಿಗೆ ಹೆಚ್ಚಿನ ಪ್ರಮಾಣದ ಗಾಯವಾಗಿದೆ. ಗಾಯಾಳುಗಳಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ. ಅಂಬೇವಾಡಿ ಕೈಗಾರಿಕಾ ಪ್ರದೇಶದ(Industrial area) ಬಿಹಾತಿ ಗೋಡಾನ್ ಕಟ್ಟಡದ ಹೊರಗಡೆ ಗೂಡು ಕಟ್ಟಿಕೊಂಡಿದ್ದು, ಸ್ಥಳೀಯ ಕಾರ್ಮಿಕರಿಗೆ ಇದರಿಂದ ತೊಂದರೆಯಾಗುವುದು ನಿಶ್ಚಿತ ಎಂಬ ಮಾತು ಕೇಳಿ ಬರತೊಡಗಿದೆ. ಈ ಬಗ್ಗೆ ಸಂಬಂಧಪಟ್ಟವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.