ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಚಿಕ್ಕಮಗಳೂರು(Chikkamangalore) : ತಮಿಳುನಾಡು ಕಡೆಯ ದಾವೂದ್(Dawood) ಹೆಸರಿನ ಸ್ಟಿಕ್ಕರ್ಗಳಿದ್ದ ಖಾಸಗಿ ಬಸ್ಸನ್ನು ಪೊಲೀಸರು ಎಸ್ಎಂಸಿ ಸರ್ಕಲ್ ಬಳಿ ವಶಪಡಿಸಿಕೊಂಡ ಘಟನೆ ಚಿಕ್ಕಮಗಳೂರುನಲ್ಲಿ(Chikkamanglore) ನಡೆದಿದೆ.
ಹಿಂದೂ ಪರ ಸಂಘಟನೆಗಳು ಪ್ರಚೋದನಕಾರಿ ಬರಹಗಳುಳ್ಳ ಬಸ್ ತಡೆದು ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕಾಗಮಿಸಿದ ಪೊಲೀಸರು ಬಸ್ ವಶಕ್ಕೆ ಪಡೆದಿದ್ದಾರೆ. ‘ಲಿವ್ ಬೈ ಎ ಗನ್, ಡೈ ಬೈ ಎ ಗನ್’ (Live by a gun, Die by a gun) ಎಂಬ ಪ್ರಚೋದನಕಾರಿ ಸ್ಟಿಕ್ಕರ್ ಮತ್ತು ಬರಹಗಳನ್ನು ಬಸ್ಸಿನ ಮೇಲೆ ಅಂಟಿಸಲಾಗಿದೆ. ಅಲ್ಲದೆ ‘ಕ್ರೈಮ್ ಲಾರ್ಡ್ ಕ್ರಾನಿಕಲ್ಸ್’ ಹಾಗೂ ‘ದಾವೂದ್ ದಿ ರಿಯಲ್ ಡಾನ್’ ಎಂಬ ಬರಹಗಳು ಬಸ್ ನಲ್ಲಿ ಕಂಡುಬಂದಿದ್ದರಿಂದ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಬಸ್ ಹಿಂಭಾಗದಲ್ಲಿ ‘ಡಿ ಗ್ಯಾಂಗ್ ಆಫ್ ಮುಂಬೈ’ (D-Gang of Mumbai), ‘ಬಾಂಬೆ ಅಂಡರ್ ವರ್ಲ್ಡ್ ದಾವೂದ್ ರಿಯಲ್ ಡಾನ್’ ಎಂದು ಪೇಂಟ್ ಮಾಡಿಸಿರುವುದು ದೇಶದ್ರೋಹಿ ಚಟುವಟಿಕೆಯ ವ್ಯಕ್ತಿಯನ್ನು ವೈಭವೀಕರಿಸಲಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ವಿಚಿತ್ರ ಪೇಂಟಿಂಗ್ ಇರುವ ಬಸ್ ನೋಡಿದ ಕೂಡಲೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಡೆದು ಬಸವನಹಳ್ಳಿ ಠಾಣೆಯ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಸಾರ್ವಜನಿಕರು ಮತ್ತು ಸಂಘಟನೆಗಳು ಪ್ರತಿಭಟಿಸಿದ್ದರಿಂದ ಬಸ್ಸನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನು ಓದಿ : ಕಾಂಗ್ರೆಸ್ ಮುಖಂಡನ ಕೇಸ್. ಕೊಲೆಗೆ ಯತ್ನಿಸಿದವರು ಎಸ್ಕೇಪ್ ಆದ್ರು. ಸಾಥ್ ನೀಡಿದವರು ಸಿಕ್ಕಿ ಬಿದ್ರು.
