ಮಂಗಳೂರು(MANGLORE) : ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ನೌಕರರ ಸಂಘ (ಐ ಎಲ್ ಸಿ) (KFDCL) ಸಭೆಯು ಮಲ್ಲಿಕಟ್ಟೆಯ (Mallikatte) ಇಂದಿರಾ ಗಾಂಧಿ ಜನ್ಮ ಶತಾಬ್ದಿ ಭವನದಲ್ಲಿ ಇತ್ತೀಚಿಗೆ ನಡೆಯಿತು.
2024-25 ನೇ ಸಾಲಿನ ನೂತನ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೆ.ಸದಾಶಿವ ಶೆಟ್ಟಿ, ಅಧ್ಯಕ್ಷರಾಗಿ ಲಾರೆನ್ಸ್ ಡಿ.ಸೋಜ, ಉಪಾಧ್ಯಕ್ಷರಾಗಿ ಅಜಿತ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಪವಿತ್ರ ಕೋಟ್ಯಾನ್, ಖಜಾಂಜಿಯಾಗಿ ಪ್ರಸಾದ್ ಮತ್ತು ಸುಜಾತ ಅವರನ್ನು ಆಯ್ಕೆ ಮಾಡಲಾಯಿತು.
ಇನ್ನೂ ಘಟಕ ಕಾರ್ಯದರ್ಶಿಯಾಗಿ ಮಂಗಳೂರಿಗೆ ವಿಜಯ ಲಕ್ಷ್ಮಿ, ಬೆಂಗಳೂರಿಗೆ ಯತೀಶ್, ಉತ್ತರ ಕನ್ನಡ ಜಿಲ್ಲೆಗೆ ರಾಮ.ಟಿ.ಮೊಗೇರ್ ಮತ್ತು ಹರೀಶ್ ಕಾಂಚನ್, ಜೊತೆ ಕಾರ್ಯದರ್ಶಿಯಾಗಿ ಉಷಾ ಅವರನ್ನು ಪದಾಧಿಕಾರಿಗಳನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ವಾರ್ಷಿಕ ಮಹಾಸಭೆಯಲ್ಲಿ ಶ್ರೀಮತಿ ಪವಿತ್ರ ಕೋಟಿಯನ್ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ವರ್ಷದ ಲೆಕ್ಕ ಪತ್ರವನ್ನು ಮಹಾಸಭೆಯಲ್ಲಿ ಓದಿ ಹೇಳಿ ಸರ್ವಾನುಮತದಿಂದ ಲೆಕ್ಕ ಪತ್ರವನ್ನು ಅಂಗೀಕರಿಸಲಾಯಿತು.
ಇದನ್ನು ಓದಿ : ಕಾರವಾರದಲ್ಲಿ ಅದ್ದೂರಿಯ ಕನ್ನಡ ಸಾಹಿತ್ಯ ಸಮ್ಮೇಳನ