ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ನಗರದಲ್ಲಿ ಕುಸಿದ ಹಳೆಯ ಕಾಳಿ ಸೇತುವೆಯ(Kali Bridge) ಭಾಗ ತೆರವುಗೊಳಿಸುವ ವೇಳೆ ಪಿಲ್ಲರ್ ತುಂಡು ಹೊಸ ಸೇತುವೆ ಮೇಲೆ ಬಿದ್ದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಗೋವಾದಿಂದ ಕಾರವಾರ (Goa to Karwar) ಸಂಪರ್ಕಿಸುವ ಕಾಳಿ ಸೇತುವೆ 2024ರ ಆಗಸ್ಟ್ ತಿಂಗಳಲ್ಲಿ ಕುಸಿದು ಬಿದ್ದಿತ್ತು. ಅಲ್ಲದೇ ನಡುವೆ ಇದ್ದಕ್ಕಿದ್ದಂತೆ ಕುಸಿದ ಸೇತುವೆಯ ಭಾಗವೊಂದು ಆಯಾ ತಪ್ಪಿ ಮೇಲಕ್ಕೆ ಬಂದು ಆತಂಕ ಹೆಚ್ಚಿಸಿತ್ತು.
ಹೆದ್ದಾರಿ ಗುತ್ತಿಗೆ ಪಡೆದ ಐಆರ್ಬಿ (IRB) ಕಂಪನಿ ಬಾರೀ ಯಂತ್ರಗಳ ಮೂಲಕ ಹೊಸ ಸೇತುವೆಗೆ ಡ್ಯಾಮೇಜ್ ಆಗದ ರೀತಿಯಲ್ಲಿ ಕುಸಿದ ಸೇತುವೆ ತೆರವುಗೊಳಿಸುತ್ತಿದೆ. ಯಾಕಂದರೆ ಹೊಸ ಸೇತುವೆ ಮೇಲೆ ಗೋವಾ(Goa) ಮತ್ತು ಕಾರವಾರ(Karwar) ಕಡೆ ತೆರಳುವ ವಾಹನಗಳು ಓಡಾಡುತ್ತಿವೆ. ಒಂದು ವೇಳೆ ಹೊಸ ಸೇತುವೆಗೆ ಹಾನಿಯಾದಲ್ಲಿ ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಇದೆ. ಹೀಗಾಗಿ ಜಾಗರುಕತೆಯಿಂದ ಸೇತುವೆ ತೆರವುಗೊಳಿಸಲಾಗುತ್ತಿದೆ.
ಮಂಗಳವಾರ ಸಹ ಮಧ್ಯೆ ಕುಸಿದ ಭಾಗ ತೆರವುಗೊಳಿಸುವಾಗ ಪಿಲ್ಲರ್ ಜಾರಿ ಹೊಸ ಸೇತುವೆಗೆ ತಾಗಿ ನೀರಿಗೆ ಬಿದ್ದಿದೆ. ಸೇತುವೆಗೆ ಹಾನಿಯಾಗಿದೆ ಎಂಬ ವದಂತಿ ಹರಡುತ್ತಿದೆ. ಹೀಗಾಗಿ ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ : ಪಾಪ ಮೊನಾಲಿಸಾ. ಆಫರ್ ನೀಡಿದ್ದ ನಿರ್ದೇಶಕ ಆರೆಸ್ಟ್.