ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ಸದಾಶಿವಗಢದಲ್ಲಿರುವ ಶಾಸಕ ಸತೀಶ್ ಸೈಲ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಗೋವಾ(Goa) ಮತ್ತು ಕರ್ನಾಟಕದ(Karnataka) ಅಧಿಕಾರಿಗಳ ತಂಡದಿಂದ ಬುಧವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಈ ದಾಳಿ(Raid) ನಡೆಸಿದ್ದಾರೆ. ಸಿಐಎಸ್ಎಪ್(CISF) ಸಿಬ್ಬಂದಿಗಳ ಭದ್ರತೆಯಲ್ಲಿ ಶಾಸಕರ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಶಾಸಕ ಸತೀಶ್ ಸೈಲ್(MLA Satish Sail) ಅವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ. ಸತೀಶ್ ಸೈಲ್ ಅವರು ಮಲ್ಲಿಕಾರ್ಜುನ ಶಿಪ್ಪಿಂಗ್(Mallikarjun Shipping) ಕಂಪನಿ ಮೂಲಕ ಅಂಕೋಲಾ(Ankola) ತಾಲೂಕಿನ ಬೆಲೇಕೇರಿ(Belekeri) ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಎದುರಿಸುತ್ತಿದ್ದರು. ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ದೆ(Santosh Hegde) ಅವರ ತಂಡ ಸೈಲ್ ವಿರುದ್ಧ ದೂರು ದಾಖಲಿಸಿತ್ತು. ಸತೀಶ್ ಸೈಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಮತ್ತು ಸುಮಾರು 44 ಕೋಟಿ ದಂಡ ವಿಧಿಸಿತ್ತು. ಜೈಲು ಸೇರಿದ್ದ ಸೈಲ್ ಅವರು ಹೈಕೋರ್ಟ್(Highcourt) ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದರು. ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು. ನಂತರವ ಹೈಕೋರ್ಟ್ ಸೈಲ್ಗೆ ಜಾಮೀನು ನೀಡಿತ್ತು.
ಇದೀಗ ಇಡಿ ಅಧಿಕಾರಿಗಳ ತಂಡ ಕರ್ನಾಟಕ(Karnataka), ಗೋವಾ(Goa) ಮತ್ತು ಮುಂಬೈನ(Mumbai) ಕೆಲ ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಅದಿರು ಅಕ್ರಮ ಸಾಗಾಟದಿಂದ ಬೊಕ್ಕಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಹೀಗಾಗಿ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಗೋವಾ ಮತ್ತು ಕರ್ನಾಟಕ ತಂಡದಿಂದ ಈ ದಾಳಿ ನಡೆಸಲಾಗಿದೆ. ಮನೆಯ ಪ್ರತಿ ಕೋಣೆ, ಮೂಲೆಯನ್ನ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.
ಇದನ್ನು ಓದಿ : ಭಟ್ಕಳಕ್ಕೆ ಗಾಂಜಾ ಸಾಗಾಟ. ಪೊಲೀಸರ ದಾಳಿ. ಓರ್ವನ ಬಂಧನ. ಮತ್ತೋರ್ವ ಪರಾರಿ.