ಬೆಂಗಳೂರು : ರಾಜ್ಯ ಸರ್ಕಾರ ವಾಹನ ಸವಾರರಿಗೆ ಶಾಕ್ ನೀಡಿದೆ. ಪೆಟ್ರೋಲ್ ಮತ್ತು ಡಿಸೇಲ್ ದರದ ಮೇಲೆ ರಾಜ್ಯ ಸರ್ಕಾರ ಮಾರಾಟ ತೆರಿಗೆ ಹೆಚ್ಚಳ ಮಾಡಿದೆ.
ತಕ್ಷಣದಿಂದ ಹೊಸ ದರ ಜಾರಿಗೆ ಬರಲಿದ್ದು, ಪೆಟ್ರೋಲ್ ಪ್ರತಿ ಲೀಟರ್‌ಗೆ 3.06 ರೂ. ಮತ್ತು ಡಿಸೇಲ್ ಪ್ರತಿ ಲೀಟರ್‌ಗೆ 3.05 ರೂ. ಏರಿಕೆಯಾಗಲಿದೆ.
ಈವರೆಗೆ ಪೆಟ್ರೋಲ್ ಮೇಲೆ ತೆರಿಗೆ ಶೇ. 25.92ರಷ್ಟು ಇತ್ತು. ಈಗ ಶೇ. 3.9ರಷ್ಟು ಏರಿಕೆಯಾಗಿದೆ. ಹಾಗಾಗಿ ಪೆಟ್ರೋಲ್ ಮೇಲಿನ ತೆರಿಗೆ ಶೇ.29.84ಕ್ಕೆ ಏರಿಕೆಯಾಗಿದೆ. ಇತ್ತ ಡಿಸೇಲ್ ಮೇಲಿನ ತೆರಿಗೆ ಶೇ.14.34ರಷ್ಟು ಇತ್ತು. ಈಗ ಶೇ.4.1ರಷ್ಟು ಏರಿಕೆಯಾಗಿದ್ದು, ತೆರಿಗೆ ಶೇ.18.44ಕ್ಕೆ ತಲುಪಿದೆ.
ಸದ್ಯ ಕಾರವಾರದಲ್ಲಿ ಪೆಟ್ರೋಲ್ ದರ ಲೀಟರ್ ಗೆ 101.58 ಮತ್ತು ಡೀಸೆಲ್ ದರ ಲೀಟರ್ ಗೆ 87.47 ಇದೆ. ದರ ಜಾಸ್ತಿಯಾದಲ್ಲಿ ಇನ್ನಷ್ಟು ಹೆಚ್ಚಾಗಲಿದೆ.
ಲೋಕಸಭಾ ಚುನಾವಣೆ ಬಳಿಕ ಪೆಟ್ರೋಲ್ ಡೀಸೆಲ್ ದರ ಜಾಸ್ತಿಯಾಗಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.