ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡು(Mundgod) : ತಾಲೂಕಿನ ಪಾಳಾ–ಕೊಡಂಬಿ ರಸ್ತೆಯಲ್ಲಿ(Pala-Kodambi) ಕಾಡಾನೆ ಪ್ರತ್ಯಕ್ಷವಾದ(Elephant) ಘಟನೆ ನಡೆದಿದೆ.
ಸಾರ್ವಜನಿಕರು ನಿರಂತರವಾಗಿ ಓಡಾಡುವ ರಸ್ತೆಯ ಮಧ್ಯಭಾಗದಲ್ಲೇ ಒಂಟಿಸಲಗ(Elephant) ಅಡ್ಡಬಂದು ನಿಂತ ಪರಿಣಾಮ, ವಾಹನ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಯಿತು.
ಕಾತೂರು ಅರಣ್ಯ ವಲಯದಿಂದ(Katuru Range Forest) ಬಂದ ಗಜರಾಜ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡು ರಸ್ತೆಯಲ್ಲೇ ನಿಂತಿದ್ದರಿಂದ, ರಸ್ತೆ ಎರಡೂ ಬದಿಗಳಲ್ಲಿ ವಾಹನಗಳ ಸಾಲು ನಿರ್ಮಾಣವಾಯಿತು. ಏಕಾಏಕಿ ಕಾಡಾನೆ(Elephant) ಎದುರಾದ ಕಾರಣ ವಾಹನ ಸವಾರರು ಭಯಭೀತರಾಗಿದ್ದು, ಸ್ಥಳದಲ್ಲೇ ನಿಂತು ಆನೆಯನ್ನು ನೋಡುತ್ತ ನಿಲ್ಲಬೇಕಾಯಿತು.
ರಸ್ತೆಯಲ್ಲಿ ಆನೆ ಇರುವ ಬಗ್ಗೆ ವಾಹನ ಸವಾರರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸುಮಾರು ಅರ್ಧಗಂಟೆಯ ಬಳಿಕ ಗಜರಾಜ ತಾನಾಗಿಯೇ ಅರಣ್ಯದತ್ತ ಹೆಜ್ಜೆ ಹಾಕಿದ್ದು, ವಾಹನಗಳ ಸಂಚಾರ ಎಂದಿನಂತೆ ಮುಂದುವರಿದಿದೆ. ಕಾಡಾನೆಗಳ ಓಡಾಟ ಆತಂಕ ಹೆಚ್ಚಿಸಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.
ಇದನ್ನು ಓದಿ : ಜಿಲ್ಲಾ ಕಾರಾಗೃಹದಲ್ಲಿ ದಿಡೀರ್ ತಪಾಸಣೆ. ಕೈದಿಗಳ ಬಳಿ ಮತ್ತೆ ಮೊಬೈಲ್ ಪತ್ತೆ.
ಮುರ್ಡೇಶ್ವರದಲ್ಲಿ ಜುಗಾರಿ ಅಡ್ಡೆ ಮೇಲೆ ದಾಳಿ: ಇಬ್ಬರ ಬಂಧನ, ನಗದು ಹಾಗೂ ಬೈಕ್‌ಗಳ ವಶಕ್ಕೆ
