ಭಟ್ಕಳ(BHATKAL) : ಈ ಹಿಂದೆ ಅರಬ್ಬೀ ಸಮುದ್ರಕ್ಕೆ ಜಿಗಿದು ಈಜಾಡಿದ ಮೀನುಗಾರಿಕೆ ಮತ್ತು ಬಂದರು ಒಳನಾಡು ಸಚಿವ ಮಂಕಾಳ್ ವೈದ್ಯ(MANKAL VAIDYA) ಇದೀಗ ಯಾಂತ್ರಿಕ ದೋಣಿ ಡ್ರೈವ್ ಮಾಡಿಕೊಂಡು ಅರಬ್ಬೀ ಸಮುದ್ರಕ್ಕೆ ತೆರಳಿ ಬಾಗಿನ ಅರ್ಪಿಸಿದ್ದಾರೆ.
ಇಂದು ಬೆಳಿಗ್ಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಿಗೆ(SRI DURGAPARMESHWARI TEMPLE) ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಯಾಂತ್ರಿಕ ದೋಣಿ ಏರಿದರು.
ರಾಜ್ಯದ ಕರಾವಳಿಯಲ್ಲಿ ಇತ್ತೀಚಿಗೆ ತೀವ್ರ ಮತ್ಸ್ಯ ಕ್ಷಾಮ ಎದುರಾಗಿದ್ದು, ಇನ್ಮುಂದೆ ಕರಾವಳಿಯ ಮೀನುಗಾರರು(FISHERMAN) ಹೆಚ್ಚಿನ ಸಂಪಾದನೆ ಮಾಡುವ ನಿಟ್ಟಿನಲ್ಲಿ ಬರಪೂರವಾಗಿ ಮೀನು ಲಭಿಸುವಂತೆ ಬೇಡಿಕೊಂಡು ಗಂಗಮಾತೆಗೆ ಬಾಗಿನ ಅರ್ಪಿಸಿದರು.
ಸಚಿವರ ಬೋಟ್ ಚಾಲನೆ ಅಲ್ಲಿದ್ದ ಇತರ ಮೀನುಗಾರರು ಮತ್ತು ಬೋಟ್ ಚಾಲಕರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರು ಇದ್ದರು.
ಇದನ್ನು ಓದಿ : ಇಡಗುಂಜಿಯಲ್ಲಿ ವೈಭವೊಪೇತವಾಗಿ ಜರುಗಿದ ಗಣೇಶ ಉತ್ಸವ
ಗಣೇಶ ಪ್ರತಿಷ್ಟಾಪಿಸಿದ ಜಿಲ್ಲಾಧಿಕಾರಿ ಮಹ್ಮದ್ ರೋಶನ್
ಗಣೇಶ ಹಬ್ಬಕ್ಕಾಗಿ ಕುಟುಂಬದವರ ಜಗಳ ಕೊಲೆಯಲ್ಲಿ ಅಂತ್ಯ
.