ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ದಾಂಡೇಲಿ(Dandeli) : ನಸುಕಿನ ಜಾವ ನುಗ್ಗಿದ  ಕಾಡಾನೆಯೊಂದು(Elephant) ದನದ ಕೊಟ್ಟಿಗೆ ದ್ವಂಸ‌ ಮಾಡಿ, ಎಮ್ಮೆ ಮತ್ತು ಕರುವಿಗೆ ಗಾಯಗೊಳಿಸಿದ ಘಟನೆ ತಾಲೂಕಿನ ‌ಆಲೂರು‌ ಗ್ರಾಮದಲ್ಲಿ(Aaluru Village) ನಡೆದಿದೆ

ರಾತ್ರಿ ದಾಂಡೇಲಿ(Dandeli) ಸುತ್ತಮುತ್ತ ಓಡಾಡುತ್ತಿರುವ ಕಾಡಾನೆ  ಕಬ್ಬಿನ ಗದ್ದೆಗೂ ದಾಳಿ ಮಾಡಿದೆ. ಆಲೂರಿನ ಪುಂಡಲೀಕ ಜಾಧವ ಎಂಬುವವರ ಹೊಲದಲ್ಲಿರುವ ದನದ ಕೊಟ್ಟಿಗೆಯನ್ನು ಕಾಡಾನೆ(Elephant) ಧ್ವಂಸಗೊಳಿಸಿದೆ. ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ ಎಮ್ಮೆ ಮತ್ತು ಎಮ್ಮೆಯ ಕರುವಿಗೆ ಗಾಯವಾಗಿದೆ. ಸದ್ಯ ಜಮೀನನ್ನ  ರೈತ ವಿಷ್ಣು ದಾನಪ್ಪ ವಾಟ್ಲೇಕರ್ ಎಂಬವರು ನಡೆಸುತ್ತಿದ್ದರು ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ‌ಅರಣ್ಯ ಇಲಾಖೆಗೆ(Forest Department) ಸುದ್ದಿ ಮುಟ್ಟಿಸಿದ್ದಾರೆ.

ಇದನ್ನು ಓದಿ : ಸಂಶುದ್ದೀನ್ ವೃತ್ತ ತೆರವು. ಮುಂದೆ ಹೆಸರು ಬದಲಾವಣೆಯ ಕುತೂಹಲ.

ಮ್ಯಾರಥಾನ್ ಲ್ಲಿ ಭಾಗವಹಿಸಿದ್ದ ಸಬ್ ಇನ್ಸಪೆಕ್ಟರ್ ಕುಸಿದು ಬಿದ್ದು ಸಾವು.